ನಟಿ ರೆಂಜೂಷಾ ಮೆನನ್ ಆತ್ಮಹತ್ಯೆಗೆ ಕಾರಣ ರಿವೀಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಲಯಾಳಂ ನಟಿ ರೆಂಜೂಶಾ ಮೆನನ್ ತಮ್ಮ ಅಪಾರ್ಟ್‌ಮೆಂಟ್‌ನ ರೂಮ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೆರಿಯರ್‌ನಲ್ಲಿ ತಕ್ಕಮಟ್ಟಿಗೆ ದುಡ್ಡು ಮಾಡುತ್ತಿದ್ದ ರೆಂಜೂಶಾ ಇದ್ದಕ್ಕಿದ್ದಂತೆಯೇ ಆತ್ಮಹತ್ಯೆಯ ದಾರಿ ಹಿಡಿಯಲು ಆರ್ಥಿಕ ಸಂಕಷ್ಟವೇ ಕಾರಣ ಎಂದು ಹೇಳಲಾಗಿದೆ.

ಪತಿ ಮನೋಜ್ ಹಾಗೂ ರೆಂಜೂಶಾ ಇಬ್ಬರೂ ಕಿರುತೆರೆ ಕಲಾವಿದರಾಗಿದ್ದು, ಹೆಚ್ಚು ಚಾನ್ಸ್ ಸಿಗದೇ ಬೇಸರದಲ್ಲಿದ್ದರು. ಸಾಲ ಮಾಡಿಕೊಂಡಿದ್ದು, ತೀರಿಸಲಾಗದೆ ಒದ್ದಾಡುತ್ತಿದ್ದರು ಎನ್ನಲಾಗಿದೆ.

ತನಿಖೆಯ ಬಳಿಕವಷ್ಟೇ ಅಸಲಿ ವಿಷಯ ಹೊರಬೀಳಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!