April 9, 2026
Thursday, April 9, 2026
spot_img

ಇಂದು ಮಧ್ಯಾಹ್ನ ದ್ವಿತೀಯ PUC ಪರೀಕ್ಷೆ-1ರ ಫಲಿತಾಂಶ ಪ್ರಕಟ, ಆಲ್‌ ದಿ ಬೆಸ್ಟ್‌ ಮಕ್ಕಳೇ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದ ದ್ವಿತೀಯ ಪಿಯುಸಿ ಮಕ್ಕಳು ಹೃದಯ ಬಡಿತ ಜೋರಾಗಿದ್ದು, ಇಂದು ಮಧ್ಯಾಹ್ನವೇ ಫಲಿತಾಂಶ ದೊರೆಯಲಿದೆ.

2026ರ ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶವನ್ನುಇಂದು ಏಪ್ರಿಲ್ 9, ಗುರುವಾರ ಮಧ್ಯಾಹ್ನ 3:00 ಗಂಟೆಗೆ ಪ್ರಕಟಿಸಲಿದೆ. ಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ karresults.nic.in ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಸಂಬಂಧಿತ ಕಾಲೇಜುಗಳಿಗೂ ಸಹ ದಿನಾಂಕ 09-04-2026ರ ಮಧ್ಯಾಹ್ನ 3.00 ಗಂಟೆಗೆ ಫಲಿತಾಂಶ ಪಟ್ಟಿಯನ್ನು ಲಭ್ಯಗೊಳಿಸಲಾಗುವುದು. ಕರ್ನಾಟಕ ಒನ್ ಮೊಬೈಲ್ ಆಪ್ ನಲ್ಲಿಯೂ ಇದನ್ನು ಪಡೆಯಬಹುದು.

ಇಷ್ಟೇ ಅಲ್ಲದೇ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳು ತಮ್ಮ ಮಾರ್ಕ್ಸ್‌ ಕಾರ್ಡ್‌ನ್ನು ಡಿಜಿಲಾಕರ್‌ ಮೂಲಕವೂ ಡೌನ್‌ಲೋಡ್‌ ಮಾಡಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !