ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರಕ್ಕೆ ತಲೆನೋವಾಗಿದ್ದ ಅನ್ನಭಾಗ್ಯ ಯೋಜನೆಯ ಕಗ್ಗಂಟನ್ನು ಸಿದ್ದರಾಮಯ್ಯ ಸರ್ಕಾರ ಕಡೆಗೂ ಬಗೆಹರಿಸಿದೆ.
ಕೇಂದ್ರದ ಐದು ಕೆಜಿ ಅಕ್ಕಿ ಜೊತೆ ಮತ್ತೈದು ಕೆಜಿ ಅಕ್ಕಿ ಕೊಡ್ತೀವಿ ಎಂದು ಕಾಂಗ್ರೆಸ್ ಗ್ಯಾರೆಂಟಿ ನೀಡಿತ್ತು. ಬಳಿಕೆ ಕೇಂದ್ರದಿಂದ ಅಕ್ಕಿ ಸಿಗುತ್ತಿಲ್ಲ ನೆರೆರಾಜ್ಯಗಳ ಬಳಿ ಹಣ ಕೊಟ್ಟು ಅಕ್ಕಿ ಖರೀದಿಸುತ್ತೇವೆ ಎಂದು ಸಿಎಂ ಹೇಳಿದ್ದು, ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ ಯಾವುದೂ ಪ್ರಾಕ್ಟಿಕಲ್ ಆಗಿ ವರ್ಕೌಟ್ ಆಗುವಂಥ ಯೋಜನೆಗಳಾಗಿರಲಿಲ್ಲ.
ಈ ಮಧ್ಯೆ ವಿಪಕ್ಷಗಳು ಅಕ್ಕಿ ಕೊಡೋಕೆ ಆಗದೇ ಹೋದ್ರೆ ದುಡ್ಡಾದ್ರೂ ಕೊಡಿ ಎಂದು ಪಟ್ಟು ಹಿಡಿದಿದ್ದವು. ಅಂತೆಯೇ ಸಿದ್ದರಾಮಯ್ಯ ಸರ್ಕಾರ ಐದು ಕೆಜಿ ಅಕ್ಕಿ ಬದಲಿಗೆ ಹಣವನ್ನು ನೀಡುವ ನಿರ್ಧಾರಕ್ಕೆ ಬಂದಿದೆ. ಕ್ಯಾಬೆನಿಟ್‌ನಲ್ಲಿ ಈ ನಿರ್ಧಾರಕ್ಕೆ ಬಂದಿದ್ದು, ಒಂದು ಕೆಜಿ ಅಕ್ಕಿಗೆ 34 ರೂಪಾಯಿಯಂತೆ, ತಿಂಗಳಿಗೆ 170 ರೂಪಾಯಿ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಬಿಪಿಎಲ್ ಕಾರ್ಡ್‌ದಾದರು ಈ ವೇತನಕ್ಕೆ ಅರ್ಹರಾಗಿರುತ್ತಾರೆ. ಜುಲೈ ತಿಂಗಳಿನಿಂದಲೇ ಹಣ ವರ್ಗಾವಣೆ ಆಗಲಿದೆ ಎಂದು ಆಹಾರ ಸಚಿವ ಮುನಿಯಪ್ಪ ಮಾಹಿತಿ ನೀಡಿದ್ದಾರೆ. ಒಟ್ಟಾರೆ ಅಕ್ಕಿ ಗಲಾಟೆ ಇಲ್ಲಿಗೇ ಮುಕ್ತಾಯವಾಗಿದ್ದು, ಕಾಂಗ್ರೆಸ್ ಸಮಸ್ಯೆಗೆ ಪರಿಹಾರ ನೀಡಿದೆ.