ಯುದ್ಧ ಘರ್ಜನೆ ನಡುವೆ ಕೇಳಿಸಿತು ಕಂದಮ್ಮನ ಕೂಗು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ- ಉಕ್ರೇನ್​​ ನಡುವಿನ ಭೀಕರ ಯುದ್ಧದ ನಡುವೆ ಕೈವ್ ನ ವಾಯುನೆಲೆಯಲ್ಲಿ ಆಶ್ರಯ ಪಡೆದಿದ್ದ ಉಕ್ರೇನ್ ನ ಗರ್ಭಿಣಿ ಮಹಿಳೆ  ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ರಷ್ಯಾದ ಬಾಂಬ್ ದಾಳಿಯ ನಡುವೆ ಕೂಡ ಉಕ್ರೇನ್​ನ ಮಹಿಳೆಯೋರ್ವಳು ಕೀವ್​​​ನ ಆಶ್ರಯ ತಾಣದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, . ಉಕ್ರೇನ್​ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ.
ಈ ಕ್ಷಣವನ್ನು ವಾಯುನೆಲೆಯಲ್ಲಿ ಆಶ್ರಯ ಪಡೆದಿದ್ದ ಜನರು ದುಃಖ ಆತಂಕದ ನಡುವೆಯೂ ಖುಷಿಪಟ್ಟರು.
ರಷ್ಯಾ ಭೀಕರ ದಾಳಿಯ ನಡುವೆ ಆಶ್ರಯ ತಾಣದಲ್ಲಿ ಹುಟ್ಟಿದ ಮಗುವಿಗೆ ಸ್ವಾತಂತ್ರ್ಯ(Freedom) ಎಂದು ಹೆಸರಿಡಲಾಗಿದೆ. ಮಗುವಿನ ಫೋಟೋ ಟ್ವೀಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಾಯಿ, ಮಗಳು ಆರೋಗ್ಯವಾಗಿದ್ದಾರೆಂಬ ಮಾಹಿತಿ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!