March 15, 2026
Sunday, March 15, 2026
spot_img

ರನ್ ಮಷೀನ್ ಈಸ್ ಬ್ಯಾಕ್! 2026ರ ಐಪಿಎಲ್‌ನಲ್ಲಿ ಕೊಹ್ಲಿ ಬ್ಯಾಟ್‌ನಿಂದ ಸಿಡಿಯಲಿವೆಯೇ ದಾಖಲೆಯ ಸಿಕ್ಸರ್‌?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್ ಪ್ರೇಮಿಗಳ ಬಹುದಿನಗಳ ಕಾಯುವಿಕೆ ಅಂತ್ಯಗೊಳ್ಳುವ ಸಮಯ ಹತ್ತಿರ ಬಂದಿದೆ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ 2026, ಮಾರ್ಚ್ 28 ರಿಂದ ಅದ್ಧೂರಿಯಾಗಿ ಚಾಲನೆ ಪಡೆಯಲಿದೆ. ಈ ಬಾರಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ.

ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿರುವ ವಿರಾಟ್ ಕೊಹ್ಲಿ ಅವರನ್ನು ಮೈದಾನದಲ್ಲಿ ನೋಡಲು ಕಾತರರಾಗಿರುವ ಅಭಿಮಾನಿಗಳಿಗೆ ಈ ಬಾರಿ ವಿಶೇಷ ದಾಖಲೆಯೊಂದು ಕಾದಿದೆ. ಐಪಿಎಲ್‌ನಲ್ಲಿ ಸಿಕ್ಸರ್‌ಗಳ ತ್ರಿಶತಕ (300 ಸಿಕ್ಸರ್) ಪೂರೈಸಲು ಕೊಹ್ಲಿಗೆ ಇನ್ನು ಕೇವಲ 9 ಸಿಕ್ಸರ್‌ಗಳ ಅವಶ್ಯಕತೆಯಿದೆ.

ಒಟ್ಟು ಪಂದ್ಯಗಳು: 259 ಇನ್ನಿಂಗ್ಸ್

ಪ್ರಸ್ತುತ ಸಿಕ್ಸರ್‌ಗಳು: 291

ಗುರಿ: 300 ಸಿಕ್ಸರ್‌ಗಳು

ಈ ಮೈಲಿಗಲ್ಲು ತಲುಪಿದರೆ, ರೋಹಿತ್ ಶರ್ಮಾ (302 ಸಿಕ್ಸರ್) ಮತ್ತು ಕ್ರಿಸ್ ಗೇಲ್ (357 ಸಿಕ್ಸರ್) ಅವರಂತಹ ದಿಗ್ಗಜರ ಸಾಲಿಗೆ ವಿರಾಟ್ ಸೇರ್ಪಡೆಯಾಗಲಿದ್ದಾರೆ.

ಕಳೆದ ಸೀಸನ್‌ನಲ್ಲಿ ವಿರಾಟ್ ಅಕ್ಷರಶಃ ರನ್ ಮಳೆ ಹರಿಸಿದ್ದರು. 54ರ ಸರಾಸರಿಯಲ್ಲಿ 8 ಅರ್ಧಶತಕಗಳೂ ಸೇರಿದಂತೆ ಒಟ್ಟು 657 ರನ್ ಗಳಿಸಿದ್ದರು. ವಿಶೇಷವೆಂದರೆ, ನಿವೃತ್ತಿಯ ನಂತರವೂ ಅವರ ಫಾರ್ಮ್ ಕಡಿಮೆಯಾಗಿಲ್ಲ; ಕಳೆದ 5 ಇನ್ನಿಂಗ್ಸ್‌ಗಳಲ್ಲಿ 2 ಭರ್ಜರಿ ಶತಕ ಸಿಡಿಸಿ ಎದುರಾಳಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !