ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ಕೇದಾರನಾಥ ದೇವಾಲಯದ ಗರ್ಭಗುಡಿ ಚಿನ್ನದ ಪದರಗಳಿಂದ ಕಂಗೊಳಿಸಲಿದೆ.
ಗೋಡೆಗಳ ಹೊರತಾಗಿ, ಶಿವಲಿಂಗಕ್ಕೆ ಹೋಗುವ ಸಣ್ಣ ಕಾರಿಡಾರ್ ಹಾಗೂ ಸೀಲಿಂಗ್ ಸೇರಿ ಗರ್ಭಗುಡಿಯು ೨೩೦ ಕೆಜಿ ತೂಕದ 550 ಪದರಗಳ ಚಿನ್ನದ ಹಾಳೆಯಿಂದ ಅಲಂಕೃತಗೊಳ್ಳಲಿದೆ. ಕಾಮಗಾರಿಯ ಒಂದು ಭಾಗ ಪೂರ್ಣಗೊಂಡಿದ್ದು, ಇನ್ನು ಕೆಲಸ ಬಾಕಿ ಇದೆ ಎಂದು ದೇವಾಲಯ ಸಮಿತಿಯ ಪದಾದಿಕಾರಿಗಳು ತಿಳಿಸಿದ್ದಾರೆ.
ಅಕ್ಟೋಬರ್ 26ರ ನಂತರ ಕೇದಾರನಾಥ ದೇವಾಲಯವನ್ನು ಚಳಿಗಾಲಕ್ಕಾಗಿ ಮುಚ್ಚಲಾಗುವುದು ಈ ವೇಳೆ ಕಾರ್ಯ ಭರದಿಂದ ಸಾಗಲಿದೆ. ಮುಂಬೈನ ಉದ್ಯಮಿಯೊಬ್ಬರು ದೇವಾಲಯಕ್ಕಾಗಿ 230 ಕೆ.ಜಿ ಚಿನ್ನ ಅರ್ಪಿಸಿದ್ದಾರೆ. ಮುಂಬೈನ ವಜ್ರ ವ್ಯಾಪಾರಿಯೊಬ್ಬರು ದೇವಾಲಯಕ್ಕಾಗಿ 230 ಕೆ.ಜಿ ಚಿನ್ನ ಅರ್ಪಿಸಿದ್ದಾರೆ. ಇದರಿಂದ ಗೋಡೆಗಳಿಗೆ ಚಿನ್ನದ ಲೇಪನ ಮಾಡಲಾಗುತ್ತಿದೆ. ದೇವಾಲಯದ ಮೇಲೆ ಶಿವ,ಸರ್ಪ, ನಂದಿ ಕೆತ್ತನೆ ಮಾಡಲಾಗಿದೆ.