April 12, 2026
Sunday, April 12, 2026
spot_img

ಸಪ್ತಸ್ವರಗಳ ಸರಸ್ವತಿ ಇನ್ನು ನೆನಪು ಮಾತ್ರ: ಆಶಾ ಭೋಸ್ಲೆ ನಿಧನಕ್ಕೆ ಮಹಾರಾಷ್ಟ್ರ ಸಿಎಂ ಸಂತಾಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

“ಭಕ್ತಿಗೀತೆ, ಭಾವಗೀತೆ, ನಾಟ್ಯಸಂಗೀತ, ಘಜಲ್, ಶಾಸ್ತ್ರೀಯ ಸಂಗೀತ, ರವೀಂದ್ರ ಸಂಗೀತ, ಜಾನಪದ ಅಥವಾ ಪಾಪ್ ಯಾವುದೇ ಶೈಲಿ ಇರಲಿ, ಆಶಾ ಭೋಸ್ಲೆ ಅವರು ಪ್ರತಿಯೊಂದು ಪ್ರಕಾರದಲ್ಲೂ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ. ಅವರಿಗೆ ‘ಮಹಾರಾಷ್ಟ್ರ ಭೂಷಣ’ ಗೌರವದ ಜೊತೆಗೆ ‘ಬಂಗ್ಲಾ ವಿಭೂಷಣ್’ ಅಂತಹ ಪ್ರತಿಷ್ಠಿತ ಪ್ರಶಸ್ತಿಗಳೂ ಲಭಿಸಿವೆ. ಬದಲಾವಣೆಯನ್ನು ಇಷ್ಟು ಸಹಜವಾಗಿ ಅಳವಡಿಸಿಕೊಂಡು ಹಾಡಿದ ಮತ್ತೊಬ್ಬ ಗಾಯಕಿ ಸಿಗಲು ಸಾಧ್ಯವೇ ಇಲ್ಲ ಎಂದು ಹೇಳುವ ಮೂಲಕ ಆಶಾ ಅವರ ಬಹುಮುಖ ಪ್ರತಿಭೆಯನ್ನು ಸ್ಮರಿಸಿದ್ದಾರೆ.

ಆಶಾ ಅವರ ಉಪಸ್ಥಿತಿ ಇನ್ನು ಮುಂದೆ ನಮ್ಮೊಂದಿಗಿರುವುದಿಲ್ಲ ಎಂದು ಊಹಿಸಿಕೊಳ್ಳುವುದು ಕಷ್ಟಕರವಾಗಿದೆ. ಅವರಿಗೆ ನನ್ನ ಹೃತ್ಪೂರ್ವಕ ಶ್ರದ್ಧಾಂಜಲಿಯನ್ನು ಅರ್ಪಿಸುತ್ತೇನೆ. ಅವರ ಕುಟುಂಬದ ಮತ್ತು ದೇಶಾದ್ಯಂತ ಇರುವ ಕೋಟ್ಯಂತರ ಅಭಿಮಾನಿಗಳ ದುಃಖದಲ್ಲಿ ನಾನು ಭಾಗಿ. ಓಂ ಶಾಂತಿ.” ಎಂದು ತಮ್ಮ ಸಂತಾಪವನ್ನು ಸೂಚಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !