ನೇರಳೆ ಹಣ್ಣಿನ ಸೀಸನ್ ಆರಂಭವಾಗಿದೆ. ಮನಸಿನಲ್ಲಿ ಯಾವುದೇ ಭಯ ಇಲ್ಲದೆ ಹಣ್ಣುಗಳನ್ನು ತಿನ್ನಿ, ಸೀಸನಲ್ ಹಣ್ಣುಗಳನ್ನು ಮಿಸ್ ಮಾಡಿಕೊಳ್ಳಬೇಡಿ.. ನೇರಳೆ ಹಣ್ಣಿನಲ್ಲಿ ಏನೆಲ್ಲಾ ಇದೆ ನೋಡಿ..
ನೇರಳೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. 100 ಗ್ರಾಂ ನೇರಳೆ ಹಣ್ಣು ಸುಮಾರು 181 ಮಿಲಿಗ್ರಾಂ ವಿಟಮಿನ್ ಸಿ ಅನ್ನು ಹೊಂದಿರುತ್ತವೆ. ನೇರಳೆ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಇದ್ದು, ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಉತ್ತೇಜಿಸುತ್ತವೆ. ಜೀವಕೋಶಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತವೆ. ಇದು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಮತ್ತು ಶೀತಗಳಂತಹ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ನೇರಳೆ ಹಣ್ಣುಗಳು ಆಂಥೋಸಯಾನಿನ್ಗಳು ಮತ್ತು ಫ್ಲೇವನಾಯ್ಡ್ಗಳು ಸಮೃದ್ಧವಾಗಿವೆ. ಇದು ಉರಿಯೂತವನ್ನು ಕಡಿಮೆ ಮಾಡಲು, ರಕ್ತ ಪರಿಚಲನೆ ಸುಧಾರಿಸಲು ಹಾಗೂ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇವೆಲ್ಲವೂ ಹೃದಯದ ಆರೋಗ್ಯವನ್ನು ಸುಧಾರಿಸಲು ಪ್ರಯೋಜನಕಾರಿ. ನೈಸರ್ಗಿಕ ಲಿಪಿಡ್ ಚಯಾಪಚಯವನ್ನು ಬೆಂಬಲಿಸುವ ಮೂಲಕ ನೇರಳೆ ಹಣ್ಣುಗಳು ಆರೋಗ್ಯಕರ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ನೇರಳೆ ಹಣ್ಣುಗಳಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ನಂತಹ ಶಕ್ತಿಶಾಲಿ ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವಾಗಿದೆ. ಇದರ ನಿಯಮಿತ ಸೇವನೆಯು ಕಣ್ಣಿನ ಆರೋಗ್ಯ ಬೆಂಬಲಿಸುತ್ತದೆ. ಇದು ರೆಟಿನಾ ಮತ್ತು ಮಸೂರವನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುತ್ತದೆ. ಇದರಲ್ಲಿರುವ ಆಂಥೋಸಯಾನಿನ್ಗಳು ಕಣ್ಣುಗಳಿಗೆ ರಕ್ತದ ಹರಿವನ್ನು ಸುಧಾರಿಸುವಲ್ಲಿ ಹಾಗೂ ಉರಿಯೂತವನ್ನು ಕಡಿಮೆ ಮಾಡುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ. ಇದು ರಕ್ತನಾಳಗಳ ಆರೋಗ್ಯ ಸುಧಾರಿಸುತ್ತದೆ ಹಾಗೂ ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ ಮತ್ತು ಕಣ್ಣಿನ ಪೊರೆಗಳಂತಹ ತೊಡಕುಗಳನ್ನು ತಡೆಗಟ್ಟುವಲ್ಲಿ ಸಹಾಯವಾಗುತ್ತದೆ.
ನೇರಳೆ ಹಣ್ಣಿನಲ್ಲಿರುವ ಒಮೆಗಾ-6 ಕೊಬ್ಬಿನಾಮ್ಲ ಗಾಮಾ-ಲಿನೋಲೆನಿಕ್ ಆಮ್ಲವು ಮನಸ್ಥಿತಿಯನ್ನು ಸುಧಾರಿಸಲು ಹಾಗೂ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿಯೂ ಪರಿಣಾಮಕಾರಿಯಾಗಿದೆ. ಇದರ ನರರಕ್ಷಣಾತ್ಮಕ ಗುಣಲಕ್ಷಣಗಳು ಮೆದುಳಿನ ಕಾರ್ಯಕ್ಕೆ ಅಡ್ಡಿಪಡಿಸುವ ಅಂಶಗಳಿಂದ ರಕ್ಷಿಸುತ್ತದೆ. ಅರಿವಿನ ಕುಸಿತ ಮತ್ತು ನರಕ್ಷೀಣ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.
ನೇರಳೆ ಹಣ್ಣು ಮ್ಯಾಂಗನೀಸ್ನ ಅತ್ಯುತ್ತಮ ಮೂಲವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸ ಸಹಾಯ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಟೈಪ್ 2 ಮಧುಮೇಹ ಹೊಂದಿರುವ ಜನರು ನಿಯಮಿತವಾಗಿ ನೇರಳೆ ಹಣ್ಣು ತಿನ್ನುವುದರಿಂದ ಉತ್ತಮ ಪ್ರಯೋಜನ ಪಡೆಯಬಹುದು.