ಹೊಸದಿಗಂತ ವರದಿ, ಮಡಿಕೇರಿ:
ಸೆಲ್ಪಿ ತೆಗೆಯಲು ಮುಂದಾದ ಪ್ರವಾಸಿಗನೊಬ್ಬ ನೀರು ಪಾಲಾದ ಘಟನೆ ಹಾರಂಗಿ ಜಲಾಶಯದ ಬಳಿ ಗುರುವಾರ ನಡೆದಿದೆ.
ನೀರು ಪಾಲಾದವರನ್ನು ಬೆಂಗಳೂರು ಮೂಲದ ಸಂದೀಪ್ ಎಂದು ಗುರುತಿಸಲಾಗಿದೆ.
ಮೂವರು ಸ್ನೇಹಿತರೊಂದಿಗೆ ಕೊಡಗಿನ ಪ್ರವಾಸಕ್ಕೆ ಆಗಮಿಸಿದ್ದ ಸಂದೀಪ್, ಹಾರಂಗಿ ಅಣೆಕಟ್ಟೆ ಮುಂಭಾಗದ ಸೇತುವೆ ಬಳಿ ಸೆಲ್ಫಿ ತೆಗೆಯಲು ಮುಂದಾಗಿದ್ದರೆನ್ನಲಾಗಿದೆ. ಈ ಸಂದರ್ಭ ಆಯ ತಪ್ಪಿ ನೀರಿಗೆ ಬಿದ್ದಿದ್ದು, ಇದೀಗ ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧ ನಡೆಸುತ್ತಿದ್ದಾರೆ.
ಜೊತೆಗೆ ಬಂದಿದ್ದ ಸ್ನೇಹಿತರು ಆಘಾತಕ್ಕೆ ಒಳಗಾಗಿದ್ದು, ಯಾವುದಕ್ಕೂ ಉತ್ತರಿಸಲಾಗದ ಸ್ಥಿತಿಯಲ್ಲಿದ್ದಾರೆ.