Saturday, October 25, 2025

ಮಹಾರಾಜನ ಮೌನ, ಯುವರಾಜರ ಘರ್ಜನೆ: ವಿರಾಟ್ ಕೊಹ್ಲಿಯ ODI ಭವಿಷ್ಯವೇ ಯಕ್ಷಪ್ರಶ್ನೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದ ಎರಡೂ ಏಕದಿನ ಪಂದ್ಯಗಳ ನಂತರ ವಿರಾಟ್ ಕೊಹ್ಲಿಯ ವೃತ್ತಿಜೀವನದ ಬಗ್ಗೆ ಚರ್ಚೆಗಳು ಹೆಚ್ಚುತ್ತಿವೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಪಂದ್ಯಗಳಲ್ಲಿ ಕೊಹ್ಲಿ ರನ್ ಗಳಿಸಲು ವಿಫಲರಾಗಿದ್ದು, ಇದು ಅಭಿಮಾನಿಗಳಲ್ಲಿ ಮತ್ತು ಕ್ರಿಕೆಟ್ ವಿಶ್ಲೇಷಕರಲ್ಲಿ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈಗ ಎಲ್ಲರ ಗಮನ ಕೊಹ್ಲಿಯ ಮುಂದಿನ ಕ್ರಮಗಳ ಮೇಲೆ ಕೇಂದ್ರಿತವಾಗಿದೆ: ಇದು ಕೊಹ್ಲಿಯ ಅಂತಿಮ ಏಕದಿನ ಪ್ರವಾಸವೇ, ಅಥವಾ ಅವರು ಇನ್ನೂ ಮುಂದಿನ ಪಂದ್ಯಗಳಲ್ಲಿ ಆಟ ಮುಂದುವರಿಸುತ್ತಾರಾ?ಅನ್ನೋದು ಯಕ್ಷ ಪ್ರಶ್ನೆಯಾಗಿದೆ.

ಇನ್ನೊಂದೆಡೆ, ಕೊಹ್ಲಿಯ ಸ್ಥಾನವನ್ನು ಭರ್ತಿ ಮಾಡುವ ಆಟಗಾರರ ಆಯ್ಕೆ ಕೂಡ ಪ್ರಮುಖ ಚರ್ಚೆಯ ವಿಷಯವಾಗಿದೆ. ಯುವ ಆಟಗಾರರು ತಿಲಕ್ ವರ್ಮಾ ಮತ್ತು ರಿಯಾನ್ ಪರಾಗ್ ಅವರನ್ನು ತಮ್ಮ ಸಾಧನೆಗಳಿಂದ ಶಕ್ತಿ ಪ್ರದರ್ಶಿಸಿದ್ದು, ಟೀಂ ಇಂಡಿಯಾ ಆಯ್ಕೆ ಸಮಿತಿ ಅವರ ಮೇಲೂ ಕಣ್ಣಿಟ್ಟಿದೆ. ತಿಲಕ್ ತಮ್ಮ ಲಿಸ್ಟ್ ಎ ಕೌಶಲ್ಯ ಮತ್ತು ಚಟುವಟಿಕೆಗಳಿಂದ ಗಮನ ಸೆಳೆದಿದ್ದರೆ, ರಿಯಾನ್ ಪರಾಗ್ ಒಬ್ಬ ಶಕ್ತಿಶಾಲಿ ಆಲ್ ರೌಂಡರ್ ಆಗಿ ತಂಡಕ್ಕೆ ಬಹುಮುಖ ಸಾಮರ್ಥ್ಯ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಕೊಹ್ಲಿಯ ಅಥವಾ ಆಯ್ಕೆದಾರರ ನಿರ್ಧಾರವನ್ನು ಪ್ರಕಟಿಸಿದ ನಂತರವೇ ಯಾವ ಆಟಗಾರನು ಅದರ ಸ್ಥಾನಕ್ಕೆ ಬರುತ್ತಾನೆ ಎಂಬುದು ಸ್ಪಷ್ಟವಾಗುತ್ತೆ.

error: Content is protected !!