ಎಲ್ಲೆಲ್ಲೂ ಝಣ ಝಣ ಕಾಂಚಾಣದ ಸದ್ದು: ಒಂದು ಕೋಟಿ ಗರಿ ಗರಿ ನೋಟು ಜಪ್ತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಒಂದೆಡೆ ರಾಜಕೀಯ ಪಕ್ಷಗಳ ನಾಯಕರು ಅದ್ಧೂರಿ ಚುನಾವಣಾ ಪ್ರಚಾರ ನಡೆಸುತ್ತಿದ್ದರೆ ಇನ್ನೊಂದೆಡೆ ಕುರುಡು ಕಾಂಚಾಣದ ಸದ್ದು ಜೋರಾಗಿದೆ.

ಮತ್ತೊಂದೆಡೆ, ಮತದಾನ ಅಕ್ರಮಗಳ ಮೇಲೆ ನಿಗಾ ಇಡುತ್ತಿರುವ ಪೊಲೀಸರು ಮತ್ತು ಚುನಾವಣಾ ಅಧಿಕಾರಿಗಳು ನೋಂದಣಿಯಾಗದ ಲಕ್ಷಾಂತರ ಹಣವನ್ನು ಜಪ್ತಿ ಮಾಡುತ್ತಿದ್ದಾರೆ.

ಬೆಂಗಳೂರಿನ ಜಯನಗರದಲ್ಲಿ ₹1 ಕೋಟಿ ಮೌಲ್ಯದ ನೋಂದಣಿಯಾಗದ ನಗದು ಪತ್ತೆಯಾಗಿದೆ. ಜಯನಗರ 4ನೇ ಬ್ಲಾಕ್ ನ ಮಯಾಸ್ ಹೋಟೆಲ್ ಎದುರು ನಿಲ್ಲಿಸಿದ್ದ ಕೆಂಪು ಬಣ್ಣದ ಕಾರಿನಲ್ಲಿ ಹಣ ಹಾಗೂ ಬ್ಯಾಗ್ ಗಳು ಪತ್ತೆಯಾಗಿದೆ.

ಹಣದ ಬಗ್ಗೆ ಅನುಮಾನಗೊಂಡ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾರಿನ ಗಾಜು ಒಡೆದು ತನಿಖೆ ಆರಂಭಿಸಿದ್ದಾರೆ. ದಾಖಲೆಗಳಿಲ್ಲದೆ 1 ಕೋಟಿ ಮೌಲ್ಯದ ಹಣ ಪತ್ತೆಯಾಗಿದೆ. ಕಾರಿನ ಪಕ್ಕದಲ್ಲಿ ನಿಲ್ಲಿಸಿದ್ದ ಸುಜುಕಿ ಆಕ್ಸಸ್ ಮೋಟರ್‌ಸೈಕಲ್‌ನ ಬ್ಯಾಗ್ ನಲ್ಲಿಯೂ ಹಣ ಪತ್ತೆಯಾಗಿದೆ.

ಕಾರು, ಬೈಕ್ ಹಾಗೂ ಹಣವನ್ನು ವಶಪಡಿಸಿಕೊಂಡ ಪೊಲೀಸರು ಜಯನಗರ ಠಾಣೆಗೆ ತೆರಳಿ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here