ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಆ್ಯಕ್ಷನ್ ಹೀರೋ ಅಜಯ್ ದೇವಗನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ರೇಡ್-2’ ಈಗ ಥಿಯೇಟರ್ ಬಳಿಕ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. 2018ರ ಬ್ಲಾಕ್‌ಬಸ್ಟರ್ ಚಿತ್ರ ‘ರೇಡ್’ನ ಮುಂದುವರಿದ ಕಥೆಯಾದ ಈ ಚಿತ್ರವನ್ನು ಮೇ 1 ರಂದು ಥಿಯೇಟರ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಕೇವಲ ಒಂದೇ ತಿಂಗಳೊಳಗೆ, ಈ ಚಿತ್ರ ಇದೀಗ ಡಿಜಿಟಲ್ ವೇದಿಕೆಯಲ್ಲಿ ಲಭ್ಯವಾಗುತ್ತಿದೆ.
‘ರೇಡ್-2’ ಜೂನ್ 27ರಿಂದ ನೆಟ್‌ಫ್ಲಿಕ್ಸ್ (Netflix) ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಥಿಯೇಟರ್‌ನಲ್ಲಿ ಸಿನಿಮಾ ಮಿಸ್ ಮಾಡಿದವರು ಇದನ್ನು ಮನೆಯಲ್ಲಿ ನೋಡಿ. ಚಿತ್ರ ರಿಲೀಸ್ ಆದ ನಂತರ ಬಾಕ್ಸ್ ಆಫೀಸ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ಬಂದಿದ್ದರೂ, ‘ರೇಡ್-2’ ದೇಶದಾದ್ಯಂತ ತೀವ್ರವಾದ ಕಲೆಕ್ಷನ್ ಮಾಡಿ 2025ರಲ್ಲಿಯೇ 3ನೇ ಹೆಚ್ಚು ಗಳಿಕೆ ಮಾಡಿರುವ ಚಿತ್ರವಾಗಿ ಹೊರಹೊಮ್ಮಿದೆ.
ಈ ಚಿತ್ರವನ್ನು ಪ್ರಸಿದ್ಧ ನಿರ್ದೇಶಕ ರಾಜ್‌ಕುಮಾರ್ ಗುಪ್ತಾ ಅವರು ಡೈರೆಕ್ಟ್ ಮಾಡಿದ್ದು, ಸಂಗೀತವನ್ನು ಅಮಿತ್ ತ್ರಿವೇದಿ ನೀಡಿದ್ದಾರೆ. ಇನ್‌ಕಮ್ ಟ್ಯಾಕ್ಸ್ ಅಧಿಕಾರಿ ಅಮಯ್ ಪಟ್ನಾಯಕ್ ಪಾತ್ರದಲ್ಲಿ ಅಜಯ್ ದೇವಗನ್ ಮಿಂಚಿದ್ದಾರೆ. ಜೊತೆಗೆ ರಿತೇಶ್ ದೇಶಮುಖ್ ಹಾಗೂ ವಾಣಿ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.