ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ದರ್ಶನ್ ಜೈಲುಪಾಲಾಗಿದ್ದಾರೆ. ಆದರೆ ಈ ಮರ್ಡರ್ ಕೇಸ್‌ನಲ್ಲಿ ದರ್ಶನ್ ಹೆಸರು ಹೊರಬಿದ್ದಿದ್ದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್..
ರೇಣುಕಾಸ್ವಾಮಿಯನ್ನು ಗೋಡೌನ್‌ನಲ್ಲಿ ಇರಿಸಿಕೊಂಡು ಮನಬಂದಂತೆ ಥಳಿಸಲಾಗಿತ್ತು, ಇದರಿಂದ ಅವರು ಮೃತಪಟ್ಟಿದ್ದು, ಶವ ವಿಲೇವಾರಿ ಕಷ್ಟದ ಕೆಲಸವಾಗಿತ್ತು. ಮೃತದೇಹ ಎಲ್ಲಿ ಎಸೆದರೂ, ಏನೇ ಮಾಡಿದರೂ ಸಿಕ್ಕಿ ಬೀಳೋದು ಗ್ಯಾರೆಂಟಿ ಎಂದು ಯೋಚಿಸಿದ ದರ್ಶನ್ ತಮ್ಮದೇ ಟೀಮ್‌ನ ನಾಲ್ವರಿಗೆ ಸರಂಡರ್ ಆಗುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಫೈನಾನ್ಸ್ ವಿಚಾರಕ್ಕೆ ಕೊಲೆ ಮಾಡಿದ್ದಾಗಿ ಈ ಗ್ಯಾಂಗ್ ಸರೆಂಡರ್ ಆಗಿತ್ತು. ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಒಬ್ಬೊಬ್ಬರದ್ದು ಒಂದೊಂದು ರೀತಿಯ ಹೇಳಿಕೆ ಬಂದಿತ್ತು. ಇದರಿಂದ ಪೊಲೀಸರಿಗೆ ಅನುಮಾನ ಬಂದು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ನಾಲ್ವರ ಮೊಬೈಲ್ ಪರಿಶೀಲನೆ ವೇಳೆ ಶವ ವಿಲೇವಾರಿ ಮಾಡಿದ ರಾತ್ರಿಯಿಡೀ ದರ್ಶನ್‌ಗೆ ಕರೆ ಹೋಗಿದೆ. ಇದರಿಂದ ಸೂತ್ರದಾರ ದರ್ಶನ್ ಇರಬಹುದು ಎನ್ನುವ ಅನುಮಾನದ ಮೇಲೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ರೇಣುಕಾಸ್ವಾಮಿಯನ್ನು ಕರೆಸಿಕೊಂಡು ದರ್ಶನ್ ನಾಲ್ಕು ಏಟು ಕೊಟ್ಟು ವಾರ್ನಿಂಗ್ ನೀಡಿದ್ದಾರೆ. ಇದಾದ ಬಳಿಕ ಪವಿತ್ರಾ ಗೌಡ ಕೂಡ ರೇಣುಕಾಸ್ವಾಮಿಗೆ ಚಪ್ಪಲಿಯಲ್ಲಿ ಬಾರಿಸಿದ್ದಾರೆ. ನಂತರ ಊಟ ಹಾಗೂ ಮಾತ್ರೆ ಕೊಡುವಂತೆ ದರ್ಶನ್ ಉಳಿದವರಿಗೆ ಹೇಳಿ ಹೋಗಿದ್ದಾರೆ. ಉಳಿದವರು ಸಿಟ್ಟಿನಲ್ಲಿ ಆತನಿಗೆ ಮನಬಂದಂತೆ ಥಳಿಸಿದ್ದಾರೆ. ಗುಪ್ತಾಂಗದ ಮೇಲೆ ಒದ್ದಾಗ ಆತ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ ಎನ್ನಲಾಗಿದೆ.