WEATHER | ಇಂದೂ ಮುಂದುವರಿಯಲಿದೆ ಮಳೆ ಕಥೆ, ಯಾವೆಲ್ಲಾ ಜಿಲ್ಲೆಯಲ್ಲಿ ವರ್ಷ ಧಾರೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬೆಂಗಳೂರು, ಹಾಸನ, ಕೊಡಗು ಸೇರಿದಂತೆ ರಾಜ್ಯದ ಹಲವೆಡೆ ಇಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದ್ದು ಯೆಲ್ಲೋ ಅಲರ್ಟ್​ ಘೊಷಿಸಲಾಗಿದೆ.

ಶಿವಮೊಗ್ಗ, ತುಮಕೂರು, ವಿಜಯನಗರ, ರಾಮನಗರ, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರದಲ್ಲೂ ಮಳೆಯಾಗಲಿದೆ. ಎಂಎಂ ಹಿಲ್ಸ್​, ಬಂಡೀಪುರ, ಸಿದ್ದಾಪುರ, ಬೇಗೂರು, ಚಾಮರಾಜನಗರ, ಮೂರ್ನಾಡು, ಎಚ್​ಡಿ ಕೋಟೆ, ಪುತ್ತೂರು, ಸುಳ್ಯ, ಕೃಷ್ಣರಾಜಪೇಟೆ, ಮೈಸೂರು, ಕುಶಾಲನಗರ, ಹುಣಸೂರು, ಹಾರಂಗಿ, ಮಂಗಳೂರು, ಸೋಮವಾರಪೇಟೆ, ಕನಕಪುರ, ಭಾಗಮಂಡಲ, ಬಾಳೆಹೊನ್ನೂರಿನಲ್ಲಿ ಮಳೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!