ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನು ಪ್ರತಿದಿನವೂ ಮೂರು ಬೀದಿನಾಯಿಗಳಿಗೆ ಊಟ ಹಾಕುತ್ತಿದೆ. ಇದೀಗ ಮೂರು ನಾಯಿಗಳು ಕಾಣೆಯಾಗಿವೆ, ಅವುಗಳನ್ನು ಬೇರೆಡೆಗೆ ಸಾಗಿಸಿರುವ ಅನುಮಾನ ಇದೆ ಎಂದು ವ್ಯಕ್ತಿಯೊಬ್ಬ ಠಾಣೆಯ ಮೆಟ್ಟಿಲೇರಿದ್ದಾನೆ.
ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ದೂರು ನೀಡಿದ್ದಾರೆ. ನಾನು 10 ವರ್ಷದಿಂದ ಬೀದಿ ನಾಯಿಗಳಿಗೆ ಊಟ ಹಾಕ್ತಿದ್ದೆ, ಮನೆ ಸಮೀಪ ಇದ್ದ ಕೆಲಸಗಾರನೊಬ್ಬ ಬೀದಿ ನಾಯಿಗಳನ್ನು ಕದ್ದು, ಹಿಂಸೆ ನೀಡಿ ಇನ್ನೆಲ್ಲಿಗೋ ಬಿಟ್ಟು ಬಂದಿದ್ದಾನೆ ಎಂದು ದೂರಿದ್ದಾರೆ.
ನಾಯಿಗಳನ್ನು ಹುಡುಕಿಕೊಟ್ಟರೆ ಹತ್ತು ಸಾವಿರ ರೂಪಾಯಿ ಬಹುಮಾನ ಹಾಗೂ ಮನೆಗೆ ತಂದು ಬಿಟ್ಟರೆ 35 ಸಾವಿರ ರೂಪಾಯಿ ಬಹುಮಾನವನ್ನು ಘೋಷಿಸಿದ್ದಾರೆ.