ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಇನ್ನೇನು ಕೆಲವೇ ನಿಮಿಷಗಳಲ್ಲಿ ಮತಎಣಿಕೆ ಆರಂಭವಾಗಲಿದೆ.
ಬೆಂಗಳೂರುನಲ್ಲಿ ಈಗಾಗಲೇ ಏಳು ಕ್ಷೇತ್ರಗಳ ಸ್ಟ್ರಾಂಗ್ ರೂಮ್ ಓಪನ್ ಆಗಿದೆ.
ಆರ್ಆರ್ ನಗರ, ಗಾಂಧಿನಗರ, ಶಾಂತಿನಗರ, ಶಿವಾಜಿನಗರ, ಚಾಮರಾಜಪೇಟೆ, ಚಿಕ್ಕಪೇಟೆ ಹಾಗೂ ರಾಜಾಜಿನಗರ ಕ್ಷೇತ್ರಗಳ ಮತಎಣಿಕೆಯ ಸ್ಟ್ರಾಂಗ್ ರೂಮ್ನ್ನು ಅಧಿಕಾರಿಗಳು ತೆರೆದಿದ್ದು, ಮೊದಲು ಅಂಚೆಮತಗಳ ಎಣಿಕೆ ಆರಂಭವಾಗಲಿದೆ. ತದನಂತರ ಮಶೀನ್ನಲ್ಲಿನ ಮತಗಳನ್ನು ಎಣಿಸಲಾಗುವುದು.