ಬಾಕಿ ಸಂಬಳವೇ ಸಿಕ್ಕಿಲ್ಲ ಎಂದು ಸಚಿವರಿಗೆ ದೂರು ನೀಡಿದ ಶಿಕ್ಷಕರು; ಅಧಿಕಾರಿಗಳ ತರಾಟೆಗೆ ತೆಗೆದುಕೊಂಡ ಸಚಿವೆ ಸ್ಮೃತಿ ಇರಾನಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನಿವೃತ್ತ ಶಿಕ್ಷಕರಿಗೆ ವೇತನ ಪಾವತಿಯಾಗದ ಕುರಿತು ದೂರು ಸ್ವೀಕರಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಶಿಕ್ಷಣ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು, ಬಾಕಿ ಇರುವ ಎಲ್ಲ ವೇತನವನ್ನು ತಕ್ಷಣ ಬಿಡುಗಡೆಗೊಳಿಸುವಂತೆ ನಿರ್ದೇಶನ ನೀಡಿದರು.

ತಮ್ಮ ಸಂಸದೀಯ ಕ್ಷೇತ್ರ ಅಮೇಥಿಗೆ ಮೂರು ದಿನಗಳ ಭೇಟಿ ನೀಡಿದ್ದ ಅವರು ನಿವೃತ್ತ ಶಿಕ್ಷಕರ ಕುಂದು ಕೊರತೆಗಳನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಶುಕ್ರವಾರ (ಡಿಸೆಂಬರ್‌ 29) ನಡೆದ ಕಾರ್ಯಕ್ರಮದಲ್ಲಿ ಸ್ಮೃತಿ ಇರಾನಿ ಅವರನ್ನು ನಿವೃತ್ತ ಶಾಲಾ ಶಿಕ್ಷಕರ ಗುಂಪು ಭೇಟಿಯಾಗಿ ತಮ್ಮ ಕುಂದುಕೊರತೆಗಳ ಬಗ್ಗೆ ಹೇಳಿಕೊಂಡರು. ಈ ವೇಳೆ ಅವರು ವೇತನ ಬಾಕಿ ಇರುವ ಬಗ್ಗೆ ಪ್ರಸ್ತಾವಿಸಿದರು. ತಕ್ಷಣ ಶಿಕ್ಷಣ ಅಧಿಕಾರಿ ಕರೆ ಮಾಡಿದ ಸ್ಮೃತಿ ಇರಾನಿ ಬಾಕಿ ಇರುವ ಎಲ್ಲ ಎಲ್ಲ ವೇತನವನ್ನು ಪಾವತಿಸುವಂತೆ ನಿರ್ದೇಶನ ನೀಡಿರುವ ವಿಡಿಯೊ ವೈರಲ್ ಆಗಿದೆ.

ನಿಮ್ಮ ಬಳಿ ಯಾವುದೇ ಪ್ರಕರಣ ಇತ್ಯರ್ಥಗೊಳಿಸಲು ಬಾಕಿ ಇದ್ದರೆ ಅದನ್ನು ಇಂದೇ ತೆರವುಗೊಳಿಸಿ’ ಎಂದು ಸ್ಮೃತಿ ಇರಾನಿ ಅಧಿಕಾರಿಗೆ ಹೇಳಿದರು. ʼಅಮೇಥಿಯಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಸಮಸ್ಯೆಗಳೊಂದಿಗೆ ನೇರವಾಗಿ ತನ್ನ ಬಳಿಗೆ ಬರಬಹುದುʼʼ ಎಂದೂ ಸಚಿವೆ ತಿಳಿಸಿದರು. ‘ಅಧಿಕಾರಿಗಳು ಮಾನವೀಯತೆಯಿಂದ ವರ್ತಿಸಬೇಕು. ಇದು ಅಮೇಥಿ. ಇಲ್ಲಿನ ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯ ಸಿಗುವಂತಾಗಬೇಕು’ ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!