ಹೊಸದಿಗಂತ ಡಿಜಿಟಲ್ ಡೆಸ್ಕ್:
ನನಗೆ ಬೆದರಿಕೆ ಲೆಟರ್ ಬಂದಿರೋದು ಸಿನಿಮಾ ರಂಗದವರಿದಂಲೇ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.
ಬಿಜೆಪಿಗೆ ಸುದೀಪ್ ಸಪೋರ್ಟ್ ಎಂದು ಸುದ್ದಿ ಹಬ್ಬಿದ್ದು, ಇದೇ ದಿನ ಬೆದರಿಕೆ ಪತ್ರ ಬಂದಿದೆ. ರಾಜಕೀಯದ ಕೈವಾಡ ಇರಬಹುದು ಎಂದು ಊಹಿಸಲಾಗಿತ್ತು. ಇದು ಚಿತ್ರರಂಗದವರೇ ಮಾಡಿಸಿರೋ ಕೃತ್ಯ. ಯಾರು ಎಂದು ಗೊತ್ತಿದೆ, ಆದರೂ ಮಾತನಾಡೋದಿಲ್ಲ. ಕಾನೂನಿನ ಮೂಲಕವೇ ಉತ್ತರ ಕೊಡುತ್ತೇನೆ ಎಂದಿದ್ದಾರೆ.