April 12, 2026
Sunday, April 12, 2026
spot_img

ಚಿಕ್ಕಮಗಳೂರಿನಲ್ಲಿ ಇಬ್ಬರನ್ನು ಬಲಿ ಪಡೆದ ಪುಂಡಾನೆ ಸೆರೆ! ನಿಟ್ಟುಸಿರಾದ ಗ್ರಾಮಸ್ಥರು

ಇಬ್ಬರ ಜೀವ ತೆಗೆದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಬಂಧಿಸಿದ್ದಾರೆ. ಹುಣಸೆಹಳ್ಳಿ ಸಮೀಪದ ಪುರ ಗ್ರಾಮದ ಬಳಿ ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿದ ಅರ್ಧ ಗಂಟೆಯಲ್ಲೇ ಕಾರ್ಯಾಚರಣೆ ಆರಂಭಿಸಲಾಯಿತು.

ಅರಣ್ಯಾಧಿಕಾರಿಗಳು ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿ ನಿಗ್ರಹಿಸಿದರು. ಮದ್ದು ಪರಿಣಾಮದಿಂದ ಬೆರಣಗೋಡು ಭಾಗದ ಕೆರೆಮನೆ ಸಮೀಪ ಆನೆ ಕುಸಿದು ಬಿದ್ದಿತು. ಬಳಿಕ ಕಾರ್ಯಾಚರಣೆಗೆ ಸಾಕಾನೆಗಳನ್ನು ಕರೆತರಲಾಗಿದ್ದು, ಕಾಡಾನೆಯನ್ನು ಸ್ಥಳಾಂತರಿಸಲು ಪ್ರಯತ್ನಿಸಲಾಯಿತು. ನಾಲ್ಕು ಸಾಕಾನೆಗಳು ಪ್ರಯತ್ನ ಪಟ್ಟರು ಕಾಡಾನೆಯನ್ನು ಸೆರೆಹಿಡಿಯಲಾಯಿತು.

ಇದನ್ನೂ ಓದಿ:

ಈ ಕಾಡಾನೆ ಕಾರ್ಯಾಚರಣೆ ಶುರು ಮಾಡುವ ಅರ್ಧ ಗಂಟೆ ಮುಂಚೆ ಬೋರಮ್ಮ (33) ಎಂಬ ಮಹಿಳೆಯ ಮೇಲೆ ದಾಳಿ ನಡೆಸಿ ಕೊಂದಿತ್ತು. ಇದಕ್ಕೂ ಮೊದಲು ಫೆಬ್ರವರಿ 19ರಂದು ಕಾರ್ಮಿಕನೊಬ್ಬನನ್ನೂ ಬಲಿ ಪಡೆದಿತ್ತು. ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಆನೆಯನ್ನು ಸೆರೆ ಹಿಡಿದ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ನಿಟ್ಟುಸಿರು ಬಿಡುವಂತಾಗಿದೆ.

ಅರಣ್ಯ ಇಲಾಖೆ ಮುಂದಿನ ಕ್ರಮವಾಗಿ ಕಾಡಾನೆಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !