ಹೊಸದಿಗಂತ ಡಿಜಿಟಲ್ ಡೆಸ್ಕ್:
Asia Cup 2025 ಟೂರ್ನಿಯ 17ನೇ ಆವೃತ್ತಿಗೆ ಸಿದ್ಧತೆಗಳು ಶುರುವಾಗಿದೆ. ಇದೀಗ ಟೂರ್ನಿ ಆರಂಭಕ್ಕೆ ದಿನಾಂಕ ಫಿಕ್ಸ್ ಮಾಡಲಾಗಿದೆ. ಅದರಂತೆ ಸೆಪ್ಟೆಂಬರ್ ಮೊದಲ ವಾರದಿಂದ ಏಷ್ಯಾಕಪ್ ಶುರುವಾಗುವುದು ಖಚಿತವಾಗಿದೆ. ಅಲ್ಲದೆ ಈ ಬಾರಿ 6 ತಂಡಗಳನ್ನು ಕಣಕ್ಕಿಳಿಸಲು ಎಸಿಸಿ ನಿರ್ಧರಿಸಿದೆ.
ಯುಎಇನಲ್ಲಿ ಸೆಪ್ಟೆಂಬರ್ 5 ರಿಂದ ಟೂರ್ನಿ ಆರಂಭವಾಗಲಿದ್ದು, ಸೆ.7 ರಂದು ಭಾರತ ಮತ್ತು ಪಾಕ್ ನಡುವಿನ ಪಂದ್ಯ ನಡೆಯಲಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಯುಎಇ ಟೂರ್ನಿಯಲ್ಲಿ ಭಾಗವಹಿಸಲಿವೆ.
ಸೆ.21 ರಂದು ಫೈನಲ್ ಪಂದ್ಯ ನಡೆಯಲಿದೆ. 17 ದಿನಗಳ ಟೂರ್ನಿಯ ವೇಳಾಪಟ್ಟಿ ಪೂರ್ಣಗೊಂಡಿದೆ. ಟೂರ್ನಿಯಲ್ಲಿ ಭಾಗವಹಿಸುವ ಎಲ್ಲ ರಾಷ್ಟ್ರಗಳು ತಮ್ಮ ಸರ್ಕಾರಗಳಿಂದ ಅನುಮತಿ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ.