ಕೊಹ್ಲಿ ಸೆಂಚುರಿಗೆ ಅಂಪೈರ್ ಸಹಾಯ, ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಸಿಸಿ ಏಕದಿನ ವಿಶ್ವಕಪ್ 17ನೇ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಭಾರತ ಭರ್ಜರಿ ಗೆಲುವು ಸಾಧಿಸಿದೆ.

ಪಂದ್ಯದ ಮತ್ತೊಂದು ಹೈಲೈಟ್ ವಿರಾಟ್ ಕೊಹ್ಲಿ ಸೂಪರ್ ಸೆಂಚುರಿ. ಆಕರ್ಷಕ ಶತಕ ಸಿಡಿಸಿ ಕೊಹ್ಲಿ ಮಿಂಚಿದ್ದಾರೆ. ಆದರೆ ಶತಕದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಶುರುವಾಗಿದೆ.

ಭಾರತದ ಗೆಲುವಿಗೆ ಕೊನೆಯ ಒಂಬತ್ತು ಓವರ್‌ಗಳಲ್ಲಿ ಕೇವಲ ಎರಡು ರನ್ ಅಗತ್ಯ ಇತ್ತು. ಆದರೆ ವಿರಾಟ್ ಕೊಹ್ಲಿ ಸೆಂಚುರಿಗೆ ಮೂರು ರನ್ ಬೇಕಾಗಿತ್ತು. ವಿರಾಟ್ ಗ್ಯಾಪ್‌ನಲ್ಲಿ ಫೋರ್ ಅಥವಾ ಸಿಕ್ಸ್ ಬಾರಿಸಲು ಕಾಯ್ತಾ ಇದ್ರು.

ಈ ವೇಳೆ ಕೊಹ್ಲಿ ಸ್ಟ್ರೈಕ್‌ನಲ್ಲಿದ್ದರು, ನಸುಮ್ ಅಹ್ಮದ್ ಮೊದಲ ಬಾಲ್ ಲೆಗ್ ಸೈಡ್‌ನಲ್ಲಿ ಹಾದು ಹೋದಾಗ ಇಡೀ ಸ್ಟೇಡಿಯಂ ವೈಡ್ ಆಯ್ತು ಎಂದು ಕಣ್ಣರಿಳಿಸಿದ್ದರು. ಆದರೆ ಅಂಪೈರ್ ಮಾತ್ರ ವೈಡ್ ಎನ್ನುವ ತೀರ್ಮಾನವನ್ನು ಘೋಷಿಸಲೇ ಇಲ್ಲ.

ಇದರಿಂದ ಬಾಂಗ್ಲಾ ಹಾಗೂ ಟೀಂ ಇಂಡಿಯಾ ಶಾಕ್ ಆಗಿದ್ದರು. ಸ್ಪಷ್ಟವಾಗಿ ವೈಡ್ ಕಾಣಿಸಿದ ಬಾಲ್‌ಗೆ ಅಂಪೈರ್ ವೈಡ್ ಯಾಕೆ ನೀಡಲಿಲ್ಲ ಅನ್ನೋದು ಎಲ್ಲರಲ್ಲೂ ಕಾಡಿದ ಪ್ರಶ್ನೆಯಾಗಿದ್ದು, ಈ ಬಗ್ಗೆ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ.

 

ವೈಡ್ ಹೇಗೆ ನಿರ್ಣಯಿಸಬೇಕು ಅನ್ನೋದಕ್ಕೂ ಕಾನೂನಿದೆ, ಇದರಲ್ಲಿ ಕೆಟಲ್‌ಬರೋ ಸಂದರ್ಭದಲ್ಲಿ ವೈಡ್ ನೀಡೋದಿಲ್ಲ, ಇದೇ ವೈಡ್ ನೀಡದಿರುವುದಕ್ಕೆ ಕಾರಣವಿರಬಹುದು ಎನ್ನಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!