ಸನ್ಸ್ಕ್ರೀನ್ ಇಂದಿಗೂ ಎಷ್ಟೊ ಮಂದಿ ಬಳಕೆ ಮಾಡೋದಿಲ್ಲ, ಸೂರ್ಯನ ಹಾನಿಕಾರಕ ಕಿರಣಗಳಿಂದ ತಪ್ಪಿಸಿಕೊಳ್ಳೋದಕ್ಕೆ ಸನ್ಸ್ಕ್ರೀನ್ ಅತ್ಯಾವಶ್ಯಕ. ಸೂರ್ಯನ ಹಾನಿಕಾರಕ ಕಿರಣಗಳಿಂದ ಉಂಟಾಗುವ ಚರ್ಮದ ಕ್ಯಾನ್ಸರ್ನಿಂದ ತಪ್ಪಿಸಿಕೊಳ್ಳುವ ಸುಲಭ ವಿಧಾನವಿದು.. ಸನ್ಸ್ಕ್ರೀನ್ ಬಳಕೆ ಹೇಗೆ? ಲಾಭ ಹೇಗೆ? ಇಲ್ಲಿದೆ ಮಾಹಿತಿ..
- ಮಾರುಕಟ್ಟೆಯಲ್ಲಿ ಸಿಗುವ ಎಸ್ಪಿಎಫ್ ೪೦+ನ ಯಾವುದೇ ಸನ್ಸ್ಕ್ರೀನ್ ಪಡೆಯಿರಿ.
- ಬೆಳಗ್ಗೆ ಸೂರ್ಯ ಹುಟ್ಟಿ ಒಂದು ಗಂಟೆಯ ಆಸು ಪಾಸಿನಲ್ಲಿ ಮುಖಕ್ಕೆ ಸನ್ಸ್ಕ್ರೀನ್ ಹಚ್ಚಿ.
- ಮುಖ ಎಂದರೆ ಬರೀ ಮುಖಕ್ಕಲ್ಲ ಕುತ್ತಿಗೆ ಕಿವಿಯನ್ನು ಪರಿಗಣಿಸಿ.
- ನೀವು ಬೇರೆ ಕ್ರೀಂಗಳ ರೀತಿ ಒಂದು ಪುಟ್ಟದಾದ ಬಿಂದು ಹಚ್ಚಿದರೆ ಸಾಕು ಎಂದುಕೊಳ್ಳಬೇಡಿ, ನಿಮ್ಮ ಮೂರು ಬೆರಳುಗಳ ತುಂಬಾ ಸನ್ಸ್ಕ್ರೀನ್ ತೆಗೆದುಕೊಂಡು, ಎರಡು ಬೆರಳು ಮುಖಕ್ಕೆ ಹಾಗೂ ಒಂದು ಬೆರಳಿನ ಕ್ರೀಂ ಕುತ್ತಿಗೆ ಭಾಗಕ್ಕೆ ಹಚ್ಚಿ.
- ಬಿಸಿಲೇ ಇಲ್ಲ, ಮಳೆಗಾಲದ ದಿನ, ನಾನು ಹೊರಗೆ ಹೋಗೋದಿಲ್ಲ ಮನೆಯಲ್ಲೇ ಇರುತ್ತೀನಿ ಎಂದರೂ ಸನ್ಸ್ಕ್ರೀನ್ ಹಚ್ಚಿ. ಸೂರ್ಯನ ಕಿರಣಗಳು ಮನೆಯ ಒಳಗೂ ಬರುತ್ತವೆ ಅಲ್ವಾ?
- ಪ್ರತಿ ಮೂರು ಗಂಟೆಗೊಮ್ಮೆ ಸನ್ಸ್ಕ್ರೀನ್ ಬಳಸಿ.
ಉಪಯೋಗ ಏನು?
- ಹಾನಿಕಾರಕವಾದ ಯುವಿ ಕಿರಣಗಳಿಂದ ರಕ್ಷಣೆ
- ಬೇಗ ವಯಸ್ಸಾದವರಂತೆ ಕಾಣುವುದು ತಪ್ಪುತ್ತದೆ
- ಸ್ಕಿನ್ ಕ್ಯಾನ್ಸರ್ ರಿಸ್ಕ್ ಕಡಿಮೆ ಮಾಡುತ್ತದೆ.
- ಸನ್ಬರ್ನ್ ಆಗೋದಿಲ್ಲ.
- ಟ್ಯಾನ್ ಆಗೋದಿಲ್ಲ
- ಚರ್ಮದ ಆರೋಗ್ಯ ಹೆಚ್ಚು ಮಾಡುತ್ತದೆ.
- ಎಲ್ಲದಕ್ಕಿಂತ ಉತ್ತಮ ಕಾಸ್ಮೆಟಿಕ್
- ಮೈತುಂಬ ಬಟ್ಟೆ ಹಾಕಿದರೂ ಸನ್ಸ್ಕ್ರೀನ್ ಹಚ್ಚಿದಷ್ಟು ರಕ್ಷಣೆ ಸಿಗೋದಿಲ್ಲ.