ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಟ್ಟಿದ ಮಕ್ಕಳ ತೂಕ ಎಷ್ಟಿರೋಕೆ ಸಾಧ್ಯ? ಹೆಚ್ಚಂದರೆ ಮೂರು ಕೆಜಿ, ನಾಲ್ಕು ಕೆಜಿ ಅಷ್ಟೇ! ಆದರೆ ಬ್ರೆಜಿಲ್‌ನಲ್ಲಿ ಹುಟ್ಟಿದ ಮಗುವೊಂದು 7.3 ಕೆ.ಜಿ ತೂಕ ಇದೆ. ಹೌದು, ಎರಡು ಅಡಿ ಎತ್ತರದ ಮಗುವಿನ ಮಹಿಳೆ ಜನ್ಮನೀಡಿದ್ದಾರೆ.
ಸಿಝೇರಿಯನ್ ಮೂಲಕ ಮಗುವನ್ನು ಹೊರತೆಗೆದಿದ್ದು, ಆಂಗರ್‌ಸನ್ ಎಂದು ಮಗುವಿಗೆ ಹೆಸರಿಡಲಾಗಿದೆ. ಈ ಹಿಂದೆ ಬ್ರೆಜಿಲ್‌ನಲ್ಲಿ 6.8 ಕೆ.ಜಿ ತೂಕದ ಮಗು ಹುಟ್ಟಿದ್ದು, ಅತ್ಯಂತ ತೂಕದ ಮಗು ಎಂಬ ದಾಖಲೆ ಹೊಂದಿತ್ತು. ಆದರೆ ಇದೀಗ ಆಂಗರ್‌ಸನ್ ದಾಖಲೆ ಮುರಿದಿದ್ದಾನೆ.