June 28, 2026
Sunday, June 28, 2026
spot_img

ಅನಸ್ತೇಶಿಯಾ ಇಂಜೆಕ್ಷನ್‌ ತೆಗೆದುಕೊಂಡು ಇಡೀ ಕುಟುಂಬ ಆತ್ಮಹತ್ಯೆ, ಮಗಳ ಅನಾರೋಗ್ಯವೇ ಕಾರಣ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ಇಡೀ ಕುಟುಂಬವೊಂದು ಅನಸ್ತೇಶಿಯಾ ಇಂಜೆಕ್ಷನ್‌ ತೆಗೆದುಕೊಂಡು ಮೃತಪಟ್ಟಿದೆ.

ಅರಿವಳಿಕೆ ತಜ್ಞ ಡಾ. ಗೋಪಿ ತನ್ನ ಪತ್ನಿ ಹಾಗೂ ಮಗಳಿಗೆ ಇಂಜೆಕ್ಷನ್‌ ನೀಡಿ, ತಾವೂ ತೆಗೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೂರು ವರ್ಷದ ಮಗಳ ಅನಾರೋಗ್ಯದಿಂದ ಬೇಸರದಲ್ಲಿದ್ದ ದಂಪತಿ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿದ್ದಾರೆ. ಪತ್ನಿ ಹಾಗೂ ಮಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದರೆ ಡಾ. ಗೋಪಿಯ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಗೋಪಿ ಅವರು ಇಂದು ಮೃತಪಟ್ಟಿದ್ದಾರೆ. ಇಡೀ ಕುಟುಂಬ ದುರಂತ ಅಂತ್ಯ ಕಂಡಿದೆ. ನಾದೆಂಡ್ಲಾ ತಾಲೂಕಿನ ಸಾತುಲೂರಿನ ಗೋಪಿ ಭೋಪಾಲ್‌ನ ಏಮ್ಸ್‌ನಲ್ಲಿ ಅರಿವಳಿಕೆ ತಜ್ಞರಾಗಿ ಕೆಲಸ ಮಾಡುತ್ತಿದ್ದರು. ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂನ ಅವರ ಪತ್ನಿಯೂ ಕೂಡ ಅದೇ ಸಂಸ್ಥೆಯಲ್ಲಿ ನರ್ಸ್ ಆಗಿದ್ದರು. ದಂಪತಿ ತಮ್ಮ ಕುಟುಂಬದವರ ಒಪ್ಪಿಗೆಯೊಂದಿಗೆ ವಿವಾಹವಾಗಿದ್ದರು. ಇತ್ತೀಚಿನವರೆಗೂ ಒಟ್ಟಿಗೆ ಜೀವನ ನಡೆಸುತ್ತಿದ್ದರು. ಮೂರು ವರ್ಷದ ಮಗಳು ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮಸ್ಯೆ ಅನುಭವಿಸುತ್ತಿದ್ದಳು ಎನ್ನಲಾಗಿದೆ.

ಗೋಪಿ ಹಾಗೂ ಕುಟುಂಬ ಇಂಜೆಕ್ಷನ್‌ ತೆಗೆದುಕೊಳ್ಳುವ ಮುನ್ನ ಗೋಪಿ ತನ್ನ ಸಹೋದರಿಗೆ ಮೆಸೇಜ್‌ ಮಾಡಿ, ನಾವು ಸಾಯುತ್ತಿದ್ದೇವೆ. ಲಾಡ್ಜ್‌ನಲ್ಲಿದ್ದೇವೆ ಎಂದು ಹೇಳಿದ್ದರು ಎನ್ನಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !