ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನುಮಾನ ಅನ್ನೋದು ಸಂಬಂಧಗಳನ್ನು ಒಂದೇ ನಿಮಿಷಕ್ಕೆ ಒಡೆದುಹಾಕಿಬಿಡುತ್ತದೆ. ಇದಕ್ಕೆ ನಿದರ್ಶನದಂತೆ ಪಕ್ಕದ ಮನೆ ಯುವಕನ ಜೊತೆ ಮಾತನಾಡಿದ ಪತ್ನಿಮೇಲೆ ಪತಿ ರೇಗಿದ್ದಾನೆ.
ಇದರಿಂದ ಸಿಟ್ಟಾದ ಪತ್ನಿ ಎಣ್ಣೆ ಕುದಿಸಿ ಆತನ ಗುಪ್ತಾಂಗಕ್ಕೆ ಹಾಕಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ. ಪಕ್ಕದ ಮನೆಗೆ ಹೊಸತಾಗಿ ಬಂದ ಯುವಕನ ಜೊತೆ ಪತ್ನಿ ಭಾವನಾ ಆಗಾಗ ಮಾತನಾಡುತ್ತಿದ್ದಳು. ಇದನ್ನು ಕಂಡ ಪತಿ ಸುನೀಲ್ ಮಾತನಾಡದಂತೆ ಸೂಚನೆ ನೀಡಿದ್ದ. ಆದರೆ ಆಕೆ ಇದನ್ನು ನಿರ್ಲಕ್ಷಿಸಿ ಮಾತನಾಡಲು ಆರಂಭಿಸಿದ್ದಳು. ಫೋನ್‌ನಲ್ಲಿ ಗಂಟೆಗಟ್ಟಲೆ ಮಾತನಾಡುತ್ತಿದ್ದ ಕಾರಣ ಭಾವನಾ ಫೋನ್‌ನ್ನು ಸುನೀತ್ ಕಿತ್ತುಕೊಂಡಿದ್ದರು. ಇದೇ ವಿಷಯಕ್ಕೆ ಮನೆಯಲ್ಲಿ ಆಗಾಗ್ಗೆ ಜಗಳ ನಡೆದಿತ್ತು.
ಇದರ ಕೋಪದಲ್ಲಿ ಗಂಡ ಮಲಗಿದ್ದ ವೇಳೆ ಎಣ್ಣೆ ಕುದಿಸಿಕೊಂಡು ಬಂದು ಆತನ ಗುಪ್ತಾಂಗದ ಮೇಲೆ ಚೆಲ್ಲಿದ್ದಾಳೆ. ಸುನೀಲ್ ದೇಹದ ಶೇ.೭೦ರಷ್ಟು ಭಾಗ ಸುಟ್ಟುಹೋಗಿದೆ. ತಕ್ಷಣವೇ ಆಕೆ ಮನೆ ಬಿಟ್ಟು ಓಡಿ ಹೋಗಿದ್ದಾಳೆ. ಸುನೀಲ್ ಅರಚಾಟ ಕೇಳಿದ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಭಾವನಾಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.