ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತೀ ಬಾರಿ ಸೆಕ್ಸ್‌ಗೂ ಮುನ್ನ ಹಾಗೂ ಮಾತನಾಡುವ ಮುನ್ನ ಹಣಕ್ಕೆ ಬೇಡಿಕೆ ಇಡುತ್ತಿದ್ದ ಪತ್ನಿಯಿಂದ ಬೇಸತ್ತ ಪತಿ ಕಡೆಗೂ ವಿಚ್ಛೇದನ ನೀಡಿದ್ದಾನೆ.
ತೈವಾನ್‌ನಲ್ಲಿ 2014 ರಲ್ಲಿ ಮದುವೆಯಾದ ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿದ್ದು, ಆದರೆ ವರ್ಷಗಳು ಕಳೆಯುತ್ತಿದ್ದಂತೆ ಪತಿ ಪತ್ನಿಯರಿಬ್ಬರ ನಡುವೆ ಮಾತುಕತೆ ಕಡಿಮೆಯಾಗಿದೆ. ಇದಲ್ಲದೇ ಪತಿ ದೈಹಿಕ ಸಂಪರ್ಕಕ್ಕಾಗಿ ಹತ್ತಿರ ಬಂದಾಗ ಪತ್ನಿ ದೂರವಾಗುತ್ತಿದ್ದಳು. ಆದರೆ ಇತ್ತೀಚಿನ ದಿನಗಳಲ್ಲಿ ಮಾತುಕತೆಯಿಂದ ಹಿಡಿದು ಲೈಂಗಿಕ ಕ್ರಿಯೆ ನಡೆಸಬೇಕಾದರೂ ಆಕೆ ಹಣದ ಬೇಡಿಕೆ ಇಡುತ್ತಿದ್ದಳು ಎಂಬುದು ತಿಳಿದುಬಂದಿದೆ.
ಇದೀಗ ಪತಿಯ ದೂರಿನ ಆಧಾರದ ಮೇಲೆ ಸ್ಥಳೀಯ ನ್ಯಾಯಾಲಯ ಆತನಿಗೆ ಪತ್ನಿಯಿಂದ ಡೈವೋರ್ಸ್ ನೀಡಿದೆ. ಪ್ರತಿ ಬಾರಿ ಲೈಂಗಿಕತೆಯನ್ನು ಬಯಸಿದಾಗ ಅಥವಾ ಅವಳೊಂದಿಗೆ ಮಾತನಾಡಲು ಬಯಸಿದಾಗ ಆಕೆ1,26೦ರೂ.ಗೆ ಬೇಡಿಕೆಯಿಡುತ್ತಿದ್ದಳು ಎಂದು ವರದಿಯಾಗಿದೆ.