ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೆನ್ನೈನ ಗ್ರೌಂಡ್ ಏರ್‌ಪೋರ್ಟ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ತಮಿಳುನಾಡಿನ ( Tamil Nadu) ಪುದುಕೊಟ್ಟೈನಲ್ಲಿ ಆತನ ಪತ್ನಿಯೇ ಕೊಲೆ ಮಾಡಿದ್ದಾಳೆ.
ಆರೋಪಿ ಮಹಿಳೆಯನ್ನು ಭಾಗ್ಯಲಕ್ಷ್ಮಿ (39) ಎಂದು ಗುರುತಿಸಲಾಗಿದೆ. ವಿಲ್ಲುಪುರಂ ನಿವಾಸಿ ಜಯನಂದನ್ ಮೃತ ವ್ಯಕ್ತಿ. ಜಯನಂದನ್ ತನ್ನ ಸಹೋದರಿಯೊಂದಿಗೆ ನಂಗನಲ್ಲೂರಿನಲ್ಲಿ ವಾಸವಾಗಿದ್ದ. ಆದರೆ ಮಾ. 18ರಂದು ಆತ ತನ್ನ ಮನೆಗೆ ಹೋಗುವುದಾಗಿ ಸಹೋದರಿಗೆ ಹೇಳಿ ಮನೆಯಿಂದ ಹೋಗಿದ್ದಾನೆ.
ಬಳಿಕ ಜಯನಂದನ್‍ನ ಫೋನ್ ಸ್ವಿಚ್ ಆಫ್ ಆಗಿದ್ದು, ಆತನನ್ನು ಸಂಪರ್ಕಿಸಲು ಆಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಯನಂದನ್ ಸಹೋದರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಆಗಿರುವ ಬಗ್ಗೆ ದೂರು ದಾಖಲಿಸಿದ್ದಾಳೆ.
ಪೊಲೀಸರು ತನಿಖೆ ನಡೆಸಿದ್ದು, . ಈ ವೇಳೆ ಜಯನಂದನ್ ಸೆಮ್ಮಲಂಪಟ್ಟಿಯಲ್ಲಿರುವ ಭಾಗ್ಯಲಕ್ಷ್ಮಿಗೆ ಕೊನೆಯ ಕರೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ತನಿಖೆ ನಡೆಸಿದ್ದಾರೆ. ಈ ವೇಳೆ ಸ್ನೇಹಿತನ ಸಹಾಯದಿಂದ ಕೊಲೆ ಮಾಡಿ ಆತನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಘಟನೆಯೇನು?: ಜಯಂಧನ್ ಮತ್ತು ಭಾಗ್ಯಲಕ್ಷ್ಮಿ ಹಲವಾರು ವರ್ಷಗಳ ಹಿಂದೆ ತಾಂಬರಂನ ಹೋಟೆಲ್‍ನಲ್ಲಿ ಭೇಟಿಯಾಗಿದ್ದರು. ಅದಾದ ನಂತರ 2020ರಲ್ಲಿ ದೇವಸ್ಥಾನದಲ್ಲಿ ವಿವಾಹವಾದರು. ಆದರೆ ದಂಪತಿ 2021ರಲ್ಲಿ ಬೇರೆಯಾಗಿದ್ದರು. ಮಾ.19ರಂದು ಜಯಂಧನ್ ಭಾಗ್ಯಲಕ್ಷ್ಮಿ ಭೇಟಿ ಮಾಡಲು ಬಂದಿದ್ದ. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ಕೊಲೆಗೈದಿದ್ದಾಳೆ.
ಇದಾದ ಬಳಿಕ ಆತನ ದೇಹದ ಭಾಗಗಳನ್ನು ಕತ್ತರಿಸಿ ಸೂಟ್‍ಕೇಸ್ ಹಾಗೂ ಗೋಣಿಚೀಲದಲ್ಲಿ ಸಾಗಿಸಿದ್ದಾಳೆ. ಅದಾದ ಬಳಿಕ ಸ್ನೇಹಿತನ ಸಹಾಯ ಪಡೆದು ಕೋವಲಂ ಬಳಿಯ ನಗರದ ಹೊರವಲಯದಲ್ಲಿ ಜಯಂಧನನ್ನು ಹೂಳಿರುವುದಾಗಿ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.