ಹೊಸದಿಗಂತ ಡಿಜಿಟಲ್ ಡೆಸ್ಕ್: ಇವನೇ
ರಾಜ್ಯ ಸರಕಾರ ಮಾಹಿಳೆಯರಿಗಾಗಿ ಜಾರಿಗೆ ತಂದ ಶಕ್ತಿ ಯೋಜನೆಯಿಂದ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (Free Bus Travel for Women) ಅವಕಾಶ ನೀಡಿದೆ. ಈ ಹಿನ್ನೆಲೆ ಮಹಿಳೆಯರು ಪುಣ್ಯಕ್ಷೇತ್ರ ಹಾಗೂ ಸಮಾರಂಭಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ.
ಇದೀಗ ಈ ರೀತಿ ಹೋದ ಪತ್ನಿ ಇನ್ನೂ ಬಾರದೆ ಪತಿರಾಯ ಕಂಗಾಲಾಗಿದ್ದಾನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಸ್ ನಿಲ್ದಾಣದಲ್ಲಿ ಕುಡಕ ಪತಿರಾಯ ತನ್ನ ಪತ್ನಿ ಪ್ರವಾಸಕ್ಕೆ ಹೋದವಳು ಇನ್ನು ಬಂದಿಲ್ಲವೆಂದು ಬಿಎಂಟಿಸಿ ಬಸ್ ಟೈರ್ ಕೆಳಗಡೆ ಮಲಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತ ಅರ್ದಗಂಟೆಗೂ ಹೆಚ್ಚು ಕಾಲ ಕಿರಿಕ್ ಮಾಡಿದ್ದು, ಈತನ ಅವಾಂತರ ಉಳಿದ ಪ್ರಯಾಣಿಕರ ಪರದಾಡುವಂತಾಯಿತು.
ಸಿದ್ದರಾಮಯ್ಯ ಸರಿಯಿಲ್ಲ. ಮಹಿಳೆಯರಿಗೆ ಉಚಿತ ಪ್ರಯಾಣ ರದ್ದುಗೊಳಿಸಿ ಎಂದು ಆಗ್ರಹಿಸಿದ್ದಾನೆ. ನಂತರ ಜನರು ಆತನನ್ನು ರಕ್ಷಣೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.