ತಮ್ಮ ದೇಹದಿಂದ 10ML ರಕ್ತ ತೆಗೆದು `ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಪೋಸ್ಟರ್‌ ಬಿಡಿಸಿದ ಮಹಿಳೆ: ಓಹ್ ಮೈ ಗಾಡ್ ʼಎಂದ ವಿವೇಕ್ ಅಗ್ನಿಹೋತ್ರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನೋಡಿ ಅದೆಷ್ಟು ಜನರು ಕಣ್ಣೀರು ಹಾಕಿದ್ದಾರೆ, ಅದೆಷ್ಟು ಜನರು ವಿವಿಧ ರೀತಿಯಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಅದರ ಜೊತೆಗೆ ಗಲ್ಲಾಪೆಟ್ಟಿಗೆಯು ಸಕ್ತ್ ಆಗಿ ಫುಲ್ ಆಗಿದೆ.
ಈ ರೀತಿಯ ವಿವಿಧ ಹಂತದಲ್ಲಿ ಸಾಧನೆಯ ಹಾದಿಯಲ್ಲಿ ತೆರಳುತ್ತಿರುವ ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಅಭಿಮಾನಿ ಒಬ್ಬರು ಮಾಡಿರುವ ಕೆಲಸ ನೋಡಿ ಸ್ವತಃ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಶಾಕ್ ಆಗಿದ್ದಾರೆ.
ಇದೀಗ ‘ ದಿ ಕಾಶ್ಮಿರ್​ ಫೈಲ್ಸ್’ ಸಿನಿಮಾ ನೋಡಿದ ಮಹಿಳೆಯೊಬ್ಬರು ತಮ್ಮ ರಕ್ತದಿಂದ ಈ ಸಿನಿಮಾ ಪೋಸ್ಟರ್ ಅನ್ನು ಬಿಡಿಸಿದ್ದಾರೆ . ಹೌದು , ಪೋಸ್ಟರ್ ರಚಿಸಿದ ಮಹಿಳೆಯ ಹೆಸರು ಮಂಜೂ ಸೋನಿ . ಮಂಜೂ ಅವರು ತಮ್ಮ ದೇಹದಿಂದ 10 ಎಂಎಲ್ ರಕ್ತವನ್ನು ತೆಗೆದು , ಅದನ್ನು ಬಳಸಿ ‘ದಿ ಕಾಶ್ಮಿರ್​ ಫೈಲ್ಸ್’ ಸಿನಿಮಾ ಪೋಸ್ಟರ್ ಅನ್ನು ಬಿಡಿಸಿದ್ದಾರೆ .
ಪೋಸ್ಟರ್ ಬಿಡಿಸಿದ ಮಹಿಳೆಯ ಫೋಟೋಗಳು ವೈರಲ್ ಆಗಿದ್ದು, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಸಹ ಈ ಪರಿಯ ಪ್ರೀತಿ ಕಂಡು ಒಂದು ಕಡೆ ಶಾಕ್ ಆಗಿ ಮತ್ತೊಂದು ಕಡೆ ಆ ಮಹಿಳೆಯನ್ನು ಹೊಗಳಿದ್ದಾರೆ .
‘ ಓಹ್ ಮೈ ಗಾಡ್ . ಇದನ್ನು ನಂಬಲು ಸಾಧ್ಯವಿಲ್ಲ . ಏನು ಹೇಳಬೇಕು ಎಂಬುದೇ ತಿಳಿಯುತ್ತಿಲ್ಲ . ಮಂಜೂ ಅವರಿಗೆ ನಾನು ಹೇಗೆ ಧನ್ಯವಾದ ತಿಳಿಸಬೇಕು ಅಂತ ಗೊತ್ತಿಲ್ಲ . ಅವರಿಗೆ ನನ್ನ ಶತ ಶತ ಪ್ರಣಾಮಗಳು , ಕೃತಜ್ಞತೆಗಳು . ಅವರ ಪರಿಚಯ ನಿಮಗೆ ಯಾರಿಗಾದರೂ ಇದ್ದರೆ ನನಗೆ ಅವರ ನಂಬರ್ ಮೆಸೇಜ್ ಮಾಡಿ ‘ ಎಂದು ವಿವೇಕ್ ಅಗ್ನಿಹೋತ್ರಿ ಮೊದಲು ಟ್ವೀಟ್ ಮಾಡಿದ್ದಾರೆ .
ಅದರ ಜೊತೆಗೆ ಮಹಿಳೆ ಮಾಡಿರುವುದು ಸರಿಯಲ್ಲ ಎಂದು ವಿವೇಕ್ ಅಗ್ನಿಹೋತ್ರಿ ಅವರಿಗೆ ಅನಿಸಿದ್ದು, ‘ನಿಮ್ಮ ಭಾವನೆಗಳನ್ನು ನಾನು ಮೆಚ್ಚುತ್ತೇನೆ . ಆದರೂ ಕೂಡಾ ಈ ರೀತಿಯ ಕೆಲಸವನ್ನು ಯಾರೂ ಪ್ರಯತ್ನಿಸಬಾರದು ಎಂದು ಗಂಭೀರವಾಗಿ ನಾನು ಮನವಿ ಮಾಡಿಕೊಳ್ಳುತ್ತೇನೆ . ಇದು ಒಳ್ಳೆಯದು ಅಲ್ಲವೇ ಅಲ್ಲ . ಮನೆಯಲ್ಲಿ ಇಂಥದ್ದನೆಲ್ಲ ಮಾಡಲೇಬೇಡಿ ಎಂದುಟ್ವೀಟ್ ಮಾಡಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!