40 ವರ್ಷಗಳ ಹಿಂದೆಯೇ ಆಗಬೇಕಿದ್ದ ಕೆಲಸ ಈಗ ಪೂರ್ಣವಾಗಿದೆ : ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
“40 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಅಭಿವೃದ್ಧಿಗಳು ಈಗ ನಡೆದಿದೆ. ಈ ಕೆಲಸ ಮುಂಚೆಯೇ ಆಗಿದ್ದರೆ ಬೆಂಗಳೂರು ಜಾಗತಿಕವಾಗಿ ಮುಂಚೂಣಿಯಲ್ಲಿರುತ್ತಿತ್ತು” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಬೆಂಗಳೂರಿನ ಕೊಮ್ಮಘಟ್ಟದಲ್ಲಿ ನಡೆದ ಬೆಂಗಳೂರು ಸಬ್‌ ಅರ್ಬನ್‌ ರೈಲ್ವೇ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಅವರು “ಕರ್ನಾಟಕ ಜನರ ಪಾಲಿಗೆ ಇಂದು ಮಹತ್ವದ ದಿನವಾಗಿದೆ. ಮೂಲಭೂತ ಸೌಕರ್ಯಗಳನ್ನು ಜಾರಿಗೊಳಿಸಿದ್ದಕ್ಕೆ ನನಗೆ ಬಹಳ ಸಂತೋಷವಾಗಿದೆ. ಡಬಲ್‌ ಇಂಜಿನ್‌ ಸರ್ಕಾರ ರಾಜ್ಯದ ಅಭಿವೃದ್ದಿಗೆ ಭರವಸೆ ನೀಡಿತ್ತು ಆ ಎಲ್ಲಾ ಭರವಸೆಗಳಿಗೆ ಇಂದು ನಾವೆಲ್ಲ ಸಾಕ್ಷಿಯಾಗಿದ್ದೇವೆ. ನಿಮ್ಮ ಸೇವೆಗಾಗಿ ನಾವು ಸದಾ ಶ್ರಮಿಸುತ್ತೇವೆ. ರಾಜ್ಯಕ್ಕೆ ಐದು ರಾಷ್ಟ್ರೀಯ ಹೆದ್ದಾರಿಗಳನ್ನು ನೀಡಿದ್ದೇವೆ. ಖಾಸಗಿ ವಲಯಕ್ಕೆ ಸಂಬಂಧಿಸಿದಂತೆ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಏಳು ರೈಲ್ವೆ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಾಗಿದೆ. ಬೆಂಗಳೂರು ಟ್ರಾಫಿಕ್‌ ಮುಕ್ತ ನಗರವನ್ನಾಗಿ ಮಾಡಲು ರೈಲು, ಮೆಟ್ರೋ, ಸಬರ್ಬನ್‌ ರೈಲಿಗೆ ಡಬಲ್‌ ಇಂಜಿನ್‌ ಸರ್ಕಾರ ಕಾರ್ಯನಿರ್ವಹಿಸಿದೆ. ಮೈಸೂರಿನಲ್ಲೂ ಇದೇ ವಿಕಾಸಯಾತ್ರೆಗೆ ವೇಗ ಕೊಡುವ ಕೆಲಸ ನಡೆದಿದೆ. ಸಬ್‌ ಸರ್ಬನ್ ರೈಲು ಯೋಜನೆ ಬಗ್ಗೆ 40ವರ್ಷಗಳಿಂದ ಬರೀ ಚರ್ಚೆಯಲ್ಲೇ ಕಾಲ ಕಳೆಯಲಾಗಿತ್ತು. ಈ ಚರ್ಚೆಗೆ ತೆರೆ ಎಳೆದು ಕೆಲಸವನ್ನು ಪೂರ್ಣಗೊಳಿದ್ದೇವೆ” ಎಂದರು.

“ಬೆಂಗಳೂರು ಕಂಟೋನ್ಮೆಂಟ್‌ ಹಾಗೂ ಯಶವಂತಪುರ ಜಂಕ್ಷನ್‌ ನವೀಕರಣ ಯೋಜನೆ ರೂಪಿಸಲಾಗಿದೆ. ಪಿಎಂ ಗತಿಶಕ್ತಿ ಯೋಜನೆಯಡಿ ಸಾರಿಗೆ ವೆಚ್ಚ ಕಡಿಮೆ ಮಾಡುವ ಪ್ರಯತ್ನದಲ್ಲಿ ಮಲ್ಟಿ ಮಾಡೆಲ್‌ ಲಾಜಿಸ್ಟಿಕ್‌ ಪಾರ್ಕ್‌ ನಿರ್ಮಾಣವಾಗಲಿದೆ. ಬೆಂಗಳೂರು ಅಭಿವೃದ್ಧಿ ಯುವಜನತೆಯ ಕನಸು, ನಿಮ್ಮ ಕನಸು ನನಸು ಮಾಡುವತ್ತ ನಾವು ಸದಾ ಶ್ರಮಿಸುತ್ತೇವೆ. 14ತಿಂಗಳಲ್ಲಿ ನಗರ ರೈಲು ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ. 1980ನೇ ಇಸವಿಯಿಂದಲೂ ಸಿಟಿ ರೈಲು ಬಗ್ಗೆ ಚರ್ಚೆ, ಸುಮಾರು ನಲವತ್ತು ವರ್ಷಗಳಿಂದ ಚರ್ಚೆಯ್ಲೇ ಕಾಲಹರಣ ಮಾಡಿದ್ದಾರೆ. ಎಂಟು ವರ್ಷಗಳಿಂದೀಚೆಗೆ ರೈಲು ಅಭಿವೃದ್ಧಿಯಲ್ಲಿ ಅಮೂಲಾಗ್ರ ಬದಲಾವಣೆ ನಡೆದಿದೆ” ಎಂದು ಮೋದಿ ಹೇಳಿದರು.

“ಉದ್ಯಮಶೀಲತೆ, ಸಂಶೋಧನೆ, ಖಾಸಗಿ ಕ್ಷೇತ್ರಗಳು ಹಾಗೂ ದೇಶದ ಯುವಕರಿಗೆ ಅವಕಾಶ ಕೊಟ್ಟರೆ ಏನೆಲ್ಲಾ ಸಾಧಿಸಬಹುದು ಎಂಬುದನ್ನು ಬೆಂಗಳೂರು ಸಾಧಿಸಿ ತೋರಿಸಿದೆ. ಕೊರೋನಾ ಕಾಲದಲ್ಲಿ ವಿಶ್ವಕ್ಕೇ ಬೆಂಗಳೂರಿನ ಯುವಕರು ಕೊಡುಗೆ ನೀಡಿದ್ದಾರೆ. ಇದು ದೇಶದ ಯುವಕರ ಕನಸಿನ ನಗರ. ದರ ಹಿಂದೆ ಉದ್ಯಮಶೀಲತೆ, ಸಂಶೋಧನೆ, ಸರ್ಕಾರಿ-ಖಾಸಗಿ ಕ್ಷೇತ್ರಗಳ ಸಹಯೋಗಗಳ ಕೊಡುಗೆಯಿದೆ” ಎಂದು ಪ್ರಧಾನಿ ಮೋದಿ ಬೆಂಗಳೂರನ್ನು ಹಾಡಿ ಹೊಗಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!