ಹೊಸದಿಗಂತ ಡಿಜಿಟಲ್ ಡೆಸ್ಕ್:
ಔಿಶ್ಇವವಿಖ್ದಯಾತ ಜೋಗ್ರಫಾಲ್ಸ್ ನೋಡೋದಕ್ಕೆ ದೇಶ ವಿದೇಶಗಳಿಗಂದಲೂ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದೇ ಕಾರಣದಿಂದ ಇದೀಗ ಜೋಗವನ್ನು ಇನ್ನಷ್ಟು ಹೈಟೆಕ್ ಮಾಡೋದಕ್ಕೆ ನಿರ್ಧರಿಸಲಾಗಿದೆ.
ಇನ್ನೇನು ಬಹುತೇಕ ಕಾಮಗಾರಿಗಳು ಮುಕ್ತಾಯದ ಹಂತ ತಲುಪಿವೆ. ನೈಸರ್ಗಿಕ ಸಂಪತ್ತಿನಿಂದ ಕೂಡಿದ ಜೋಗ ಜಲಪಾತ ಪ್ರದೇಶವನ್ನು ಐಕಾನಿಕ್ ಹಾಗೂ ಮಾದರಿ ಪ್ರವಾಸೋದ್ಯಮ ಪ್ರದೇಶವಾಗುವಂತೆ ಅಭಿವೃದ್ಧಿಪಡಿಸಲಾಗುತ್ತಿದೆ. 184 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.
ಪ್ರಮುಖವಾಗಿ ಎನ್ಟ್ರೆನ್ಸ್ ಪ್ಲಾಜಾ, ಟೇಬಲ್ ಟಾಪ್ ಏರಿಯಾ ವ್ಯೂ, ವ್ಯೂ ಡೆಕ್, ಸೆಂಟ್ರಲ್ ಏರಿಯಾ, ಟ್ರಾನ್ಸಿಟ್ ಹಬ್, ಎಸ್ಟಿಪಿ ರಸ್ತೆ, ಅತ್ಯುತ್ತಮ ಚರಂಡಿ ವ್ಯುವಸ್ಥೆ, ರಿಟೇಲ್ ನೋಡ್ ಬ್ಲಾಕ್ಸ್, ಬ್ಲಾಕ್ ಎ ಬಿ ಸಿ, ಆರ್ಟ್ ಗ್ಯಾಲರಿ, ಸಿಸಿಟಿವಿ ಕಾಮಗಾರಿಗಳು ಮುಕ್ತಾಯ ಹಂತಕ್ಕೆ ತಲುಪಿವೆ.
ಸ್ವಾಭಾವಿಕ ನೈಸರ್ಗಿಕ ಸಂಪತ್ತಿನಿಂದ ಕೂಡಿದ ಈ ಪ್ರದೇಶ ಐಕಾನಿಕ್ ಸ್ಥಳವಾಗುವಂತೆ, ಇತರೆ ದೇಶಗಳೂ ಇದನ್ನು ಮಾದರಿಯಾಗಿ ಕಾಣುವಂತೆ ಮಾಡಬೇಕೆಂಬ ನಿಟ್ಟಿನಲ್ಲಿ ಕಾಮಗಾರಿಗಳನ್ನು ನಡೆಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವ್ಯು ಡೆಕ್ಗೆ ಪ್ರತಿ ದಿನ ಸಾವಿರಾರು ಜನರು ಬರುತ್ತಾರೆ. ಇದಕ್ಕೆ ಸಮರ್ಪಕ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಜನರಿಗೆ ಉತ್ತಮ ಮನೋರಂಜನೆ ಜೊತೆ ಆದಾಯ ತರುವಂತಹ ಚಟುವಟಿಕೆಗೆ ಹೆಚ್ಚು ಒತ್ತು ನೀಡಲಾಗಿದೆ. ಜಯಿಂಟ್ ವ್ಹೀಲ್ ಅಳವಡಿಸುವ ಮೂಲಕ ಅದರಿಂದ ಜೋಗ ಜಲಪಾತದ ಸೊಬಗನ್ನು ಸವಿಯುವ ಯೋಜನೆ ರೂಪಿಸಲಾಗಿದೆ.