ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾದ ಮಕಾವ್ ಟವರ್ ಮೇಲಿನಿಂದ ಬಂಜೀ ಜಂಪಿಂಗ್ ಮಾಡೋದು ಸಾಹಸ ಪ್ರಿಯರ ಅಲ್ಟಿಮೇಟ್ ಆಸೆಯಾಗಿರುತ್ತದೆ. ಇದೇ ರೀತಿ ತನ್ನ ಸಾಹಸ ಪ್ರೀತಿಯನ್ನು ಸಾಧಿಸಿಕೊಳ್ಳಲು ಬಂದ ಪ್ರವಾಸಿಗನೊಬ್ಬ ಬಂಜೀ ಜಂಪಿಂಗ್ ನಂತರ ಮೃತಪಟ್ಟಿದ್ದಾನೆ.
ಬಂಜೀ ಜಂಪಿಂಗ್ ಮಾಡುವ ವೇಳೆ ಪ್ರವಾಸಿಗ ಅದನ್ನು ಎಂಜಾಯ್ ಮಾಡಿದ್ದಾರೆ. ಮಕಾವ್ ಟವರ್‌ನ ಉದ್ದ 1100 ಅಡಿಯಾಗಿದೆ. 750 ಅಡಿ ಬಳಿ ಬಂಜಿ ಜಂಪಿಂಗ್ ಮಾಡಲು ಅವಕಾಶ ನೀಡಲಾಗಿದೆ. ಅಷ್ಟು ಮೇಲಿನಿಂದ ಹಾರಿದ ನಂತರ ಇದ್ದಕ್ಕಿದ್ದಂತೆಯೇ ಉಸಿರಾಟದ ತೊಂದರೆಯನ್ನು ಅನುಭವಿಸಿದ್ದಾರೆ.
ಸ್ವಲ್ಪವೇ ಸಮಯದಲ್ಲಿ ಪ್ರವಾಸಿಗ ಉಸಿರಾಡುವುದನ್ನೇ ನಿಲ್ಲಿಸಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ, ಆದರೆ ವ್ಯಕ್ತಿ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದಾರೆ.