ಹೊಸದಿಗಂತ ಡಿಜಿಟಲ್ ಡೆಸ್ಕ್:
ವಜ್ರ..ಮಣ್ಣಿನಲ್ಲಿರುವ ಮಾಣಿಕ್ಯ. ವಜ್ರದ ಮೌಲ್ಯ ಎಲ್ಲಿಯೂ..ಯಾವಾಗಲೂ ಕಡಿಮೆಯಾಗುವುದಿಲ್ಲ. ಇಲ್ಲಿಯವರೆಗೆ, ಅನೇಕ ವಿಧದ ವಜ್ರಗಳು ಪ್ರಪಂಚದಾದ್ಯಂತ ಇವೆ. ಗುಲಾಬಿ ವಜ್ರದಿಂದ ಕಪ್ಪು ವಜ್ರದವರೆಗೆ ತನ್ನದೇ ಆದ ಸ್ಥಾನ ಪಡೆದಿವೆ. ಇದೀಗ ಮತ್ತೊಂದು ಸುಂದರ ಹಾಗೂ ದುಬಾರಿ ವಜ್ರ ಹರಾಜಿಗೆ ಸಿದ್ಧವಾಗಿದೆ. ಇದು ವಿಶ್ವದ ‘ಅತ್ಯಂತ ಶುದ್ಧ ಹಳದಿ ವಜ್ರ’. ಗೋಲ್ಡನ್ ಕ್ಯಾನರಿ ಡೈಮಂಡ್ ಎಂದು ಕರೆಯಲ್ಪಡುವ ಈ ವಜ್ರದ ತೂಕ 303.1 ಕ್ಯಾರೆಟ್.
ಗೋಲ್ಡನ್ ಕ್ಯಾನರಿ ವಜ್ರವನ್ನು ವಿಶ್ವದ ಶುದ್ಧ ವಜ್ರ ಎಂದು ಕರೆಯಲಾಗುತ್ತದೆ. 1980 ರಲ್ಲಿ, ವಿಶ್ವದ ಪ್ರಮುಖ ವಜ್ರ ಗಣಿಗಾರಿಕೆ ಕಂಪನಿಯಾದ MIBA ಕಾಂಗೋದ ಗಣಿಯ ಮಣ್ಣಿನಲ್ಲಿ ಈ ಹಳದಿ ಬಣ್ಣದ ವಜ್ರವನ್ನು ಕಂಡುಹಿಡಿದಿದೆ. ಗೋಲ್ಡನ್ ಕ್ಯಾನರಿ ಡೈಮಂಡ್ ಎಂದು ಕರೆಯಲ್ಪಡುವ ಈ ವಜ್ರ ಪ್ರಸ್ತುತ ದುಬೈನಲ್ಲಿರುವ ಸೋಥೆಬಿ ಹರಾಜು ಮನೆಯಲ್ಲಿ ಪ್ರದರ್ಶನದಲ್ಲಿದೆ.
ಇದನ್ನು ಡಿಸೆಂಬರ್ 7, 2022 ರಂದು ನ್ಯೂಯಾರ್ಕ್‌ನಲ್ಲಿರುವ ಸೋಥೆಬಿ ಹರಾಜು ಮನೆಯಲ್ಲಿ ಹರಾಜು ಮಾಡಲಾಗುತ್ತದೆ. ವಿಶ್ವದ ನಾಲ್ಕನೇ ಅತಿ ದೊಡ್ಡ ವಜ್ರವಾಗಿದ್ದು, ಚಿನ್ನದ ಬಣ್ಣದಲ್ಲಿ ಕಣ್ಮನ ಸೆಳೆಯುವ ಮಿಂಚು ಹರಿಸಿರುವ ವಿಶ್ವದ ಈ ಶುದ್ಧ ವಜ್ರದ ಕನಿಷ್ಠ ಬೆಲೆ 123 ಕೋಟಿ. ಹರಾಜುದಾರರು ಹರಾಜಿನಲ್ಲಿ ಅದಕ್ಕಿಂತ ಹೆಚ್ಚಿನ ದರವನ್ನು ನಿರೀಕ್ಷಿಸುತ್ತಿದ್ದಾರೆ.
ಕಾಂಗೋದಲ್ಲಿ ಪತ್ತೆಯಾದಾಗ ವಜ್ರವು 890 ಕ್ಯಾರೆಟ್‌ಗಳಷ್ಟಿತ್ತು. ಸುಮಾರು 40 ವರ್ಷಗಳಿಂದ ಪಾಲಿಶ್ ಮಾಡಿ ಕೈ ಬದಲಾಗಿದ್ದರಿಂದ ವಜ್ರದ ತೂಕ ಕಡಿಮೆಯಾಗಿದೆ ಎನ್ನುತ್ತಾರೆ ಹರಾಜುದಾರರು. ಇಷ್ಟು ಪರಿಶುದ್ಧ ಹಾಗೂ ದುಬಾರಿ ವಜ್ರವನ್ನು ಯಾರ ವಶವಾಗುತ್ತೆ ಎಂಬುದನ್ನು ತಿಳಿಯಲು ಡಿಸೆಂಬರ್ 7ರವರೆಗೆ ಕಾಯಬೇಕು.