ಹೊಸದಿಗಂತ ಹಾಸನ :
ಕಳ್ಳತನವನ್ನೇ ಫ್ಯಾಷನ್ ಆಗಿ ಮಾಡಿಕೊಂಡಿದ್ದ ನಾಲ್ವರು ಖರ‍್ನಾಕ್ ಕಳ್ಳಿಯರನ್ನು 6.38 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳ ಸಹಿತ ಇದೀಗ ಪೋಲಿಸ್ ಅಥಿತಿಯಾಗಿದ್ದಾರೆ.
ಜಿಲ್ಲೆಯ ಹೊಳೆನರಸೀಪುರ ನಗರ ಠಾಣೆ ಪೊಲೀಸರು ವಿವಿಧ ಕಳ್ಳತನದ ಪ್ರಕರಣಗಳ ಪತ್ತೆ ಕರ‍್ಯಾಚರಣೆ ನಡೆಸುತ್ತಿದ್ದ ವೇಳೆ ಚಿನ್ನಾಭರಣ ಕಳ್ಳತನದಲ್ಲಿ ತೊಡಗಿದ್ದ ನಾಲ್ವರು ಖರ‍್ನಾಕ್ ಕಳ್ಳಿಯರು ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಬಂಧಿತ ಆರೋಪಿಗಳಿಂದ ೬.೩೮ ಲಕ್ಷ ರೂ. ಮೌಲ್ಯದ ಚಿನ್ನಭಾರಣಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ಗ್ರಾಮದ ಶಶಿ (35), ಮಾಧವಿ (40), ಅಕಿಲ (30) ಮತ್ತು ವಿದ್ಯಾ (29) ಬಂಧಿತ ಆರೋಪಿಗಳು. ಒಂದೇ ಗ್ರಾಮದವರಾಗಿರುವ ಈ ನಾಲ್ವರು, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರನ್ನು ಗುರಿಯಾಗಿಸಿ, ಅವರ ಚಿನ್ನದ ಸರ, ನೆಕ್ಲಸ್ ಮತ್ತು ರ‍್ಸ್ಗಳನ್ನು ಚಲಾಕಿಯಿಂದ ಕದಿಯುತ್ತಿದ್ದರು.
ಶಶಿ ಗರ‍್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದರೆ, ಉಳಿದ ಮೂವರು ಕ್ರಷರ್‌ಗಳಲ್ಲಿ ಕಲ್ಲು ಒಡೆಯುವ ಕೆಲಸದಲ್ಲಿದ್ದರು. ಆದರೆ, ಈ ನಾಲ್ವರು ಕಳ್ಳತನವನ್ನೇ ಫ್ಯಾಷನ್ ಆಗಿ ಮಾಡಿಕೊಂಡಿದ್ದರು. ಬಂಧಿತರಿಂದ ೩೫ ಗ್ರಾಂ ಚಿನ್ನದ ಸರ, ೨೨ ಗ್ರಾಂ ನೆಸ್ಸೆಸ್, ೫ ಗ್ರಾಂ ಬೆಳ್ಳಿ ಗಣಪತಿ ಡಾಲರ್ ಮತ್ತು ೨೯ ಚಿನ್ನದ ವಶಪಡಿಸಿಕೊಂಡಿದ್ದಾರೆ. ಸರವನ್ನು ಪೊಲೀಸರು
ಶಶಿ ಮತ್ತು ವಿದ್ಯಾ ವಿರುದ್ಧ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಹೊಳೆನರಸೀಪುರ ಪೊಲೀಸರು ಈ ಗ್ಯಾಂಗ್‌ನ ಇತರ ಚಟುವಟಿಕೆಗಳ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.