ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನ ರಿಂಗ್ ರಸ್ತೆಯಲ್ಲಿ ನೂತನವಾಗಿ ಅಳವಡಿಸಿದ್ದ ವಿದ್ಯುತ್ ಸ್ವಿಚ್ ಬಾಕ್ಸ್ ಕಳುವಾಗಿದ್ದು, ಸಂಸದ ಪ್ರತಾಪ್ ಸಿಂಹ ಬೇಸರ ವ್ಯಕ್ತಪಡಿಸಿದ್ದಾರೆ.
ಲೈಟು ಬೇಕು ಅಂದ್ರಿ ಶ್ರಮಪಟ್ಟು ಹಾಕಿಸಿದ್ದೆ. ಆದರೆ ಎರಡೇ ದಿನದಲ್ಲಿ ಸಾತಗಳ್ಳಿ ಬಳಿ ಕಳ್ಳರ ಕಾಟ ಶುರುವಾಗಿದೆ. ಎಂಸಿಬಿ ಸ್ವಿಚ್ಸ್ ಕದ್ದು, ವಿದ್ಯುತ್ ಸಂಪರ್ಕ ತೆಗೆಯುತ್ತಿದ್ದಾರೆ. ಇಂದಿನಿಂದ ರಾತ್ರಿ ಗಸ್ತು ಆರಂಭಿಸುತ್ತೇನೆ, ಸಿಸಿಕ್ಯಾಮೆರಾ ಕೂಡ ಅಳವಡಿಸುತ್ತೇವೆ ಎಂದು ಹೇಳಿದ್ದಾರೆ.
ಜನರಿಗಾಗಿ ಮಾಡಿದ ಸೌಕರ್ಯವನ್ನು ಯಾರೋ ಒಬ್ಬರು ಹಾಳು ಮಾಡಿದರೆ ಹೇಗೆ? ಮತ್ತೊಮ್ಮೆ ಕಳ್ಳತನ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.