ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಿಯಕರನಿಗಾಗಿ ಚಿನ್ನ ಕದ್ದ ಯುವತಿ ಪೋಷಕರನ್ನು ಕಳೆದುಕೊಂಡು ಆಸ್ಪತ್ರೆ ಸೇರಿದ್ದಾಳೆ. ರಾಯಚೂರು ಜಿಲ್ಲೆಯ ಹೊರವಲಯದಲ್ಲಿ ಒಂದೇ ಕುಟುಂಬ ಮೂವರು ಸದಸ್ಯರು ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯಲ್ಲಿ ಪೋಷಕರು ಸಾವನ್ನಪ್ಪಿದ್ದು, ಮಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಮೀರ್ ಅಹ್ಮದ್ (44) ಮತ್ತು ಜುಲ್ಲಾಕಾ ಬೇಗಂ (40) ಮೃತ ದಂಪತಿ. ಮೆಹಾಮುನ್ (21) ಗಂಭೀರ ಗಾಯಗೊಂಡು ರೀಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇತ್ತೀಚೆಗಷ್ಟೇ ಮಹಿಮ್ಮದ್ ಹುಸೇನ್ ಎಂಬುವವರ ಮನೆಯಲ್ಲಿ ವಜ್ರ ಹಾಗೂ ಚಿನ್ನದ ಸರ ಕಳ್ಳತನವಾಗಿತ್ತು. ಹೀಗಾಗಿ ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಟ್ಯೂಷನ್ ನೆಪದಲ್ಲಿ ಮೆಹಾಮುನ್ ಚಿನ್ನಾಭರಣ ಕದ್ದಿರುವುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.