ಉತ್ತರ ಕರ್ನಾಟಕ ಭಾಗದಲ್ಲಿ ಮೊದಲ ಎದೆಹಾಲು ಬ್ಯಾಂಕ್ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ತಾಯಿಯ ಹಾಲಿನ ಕೊರತೆಯಿಂದ ಬಳಲುವ ನವಜಾತ ಶಿಶುಗಳಿಗಾಗಿ ಇದೀಗ ಎದೆಹಾಲಿನ ಬ್ಯಾಂಕ್‌ ಓಪನ್‌ ಆಗಿದೆ. ಮಕ್ಕಳಿಗೆ ಮೊದಲ ಅಮೃತ ನೀಡುವ ಬ್ಯಾಂಕ್‌ ಇದಾಗಿದ್ದು, ಎಷ್ಟೋ ಕಂದಮ್ಮಗಳ ಆರೋಗ್ಯಕ್ಕಾಗಿ ಬ್ಯಾಂಕ್‌ ಸಹಾಯ ಮಾಡಲಿದೆ.

ವಿಜಯಪುರ ಸರ್ಕಾರಿ ಆಸ್ಪತ್ರೆಯು ಉತ್ತರ ಕರ್ನಾಟಕದಲ್ಲಿ ಮೊದಲ ಎದೆಹಾಲು ಬ್ಯಾಂಕ್ ಸ್ಥಾಪಿಸಲು ಮುಂದಾಗಿದೆ. ಇದು ವಾರ್ಷಿಕವಾಗಿ 2 ಸಾವಿರ ನವಜಾತ ಶಿಶುಗಳಿಗೆ ಸೇವೆ ಸಲ್ಲಿಸಲಿದೆ. ಸುಶೇನಾ ಹೆಲ್ತ್ ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಡಾ ಸಂತೋಷ್ ಕರ್ಲೆಟ್ಟಿ ನೇತೃತ್ವದಲ್ಲಿ ಎದೆ ಹಾಲು ಬ್ಯಾಂಕ್ ಸ್ಥಾಪನೆ ಮಾಡಲಾಗುತ್ತಿದ್ದು, ಅಕಾಲಿಕ ಮತ್ತು ಅನಾರೋಗ್ಯದ ಶಿಶುಗಳ ಪೌಷ್ಟಿಕಾಂಶದ ಅಗತ್ಯಗಳನ್ನು ಪರಿಹರಿಸುವ ಗುರಿ ಹೊಂದಲಾಗಿದೆ.

ಆರೋಗ್ಯ ಮತ್ತಿತತರ ಕಾರಣಗಳಿಂದಾಗಿ ತಾಯಿಯಂದರು ಎದೆಹಾಲು ನೀಡಲು ಸಾಧ್ಯವಾಗದಂತಹ ದುರ್ಬಲ ಮಕ್ಕಳಿಗೆ ಎದೆಹಾಲು ಒದಗಿಸುವ ಮೂಲಕ ನವಜಾತ ಶಿಶುಗಳ ಮರಣ ಕಡಿಮೆ ಮಾಡುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ.

ಆಸ್ಪತ್ರೆಯಲ್ಲಿ ಪ್ರತಿ ವರ್ಷ ಸುಮಾರು 10,000 ಹೆರಿಗೆಗಳನ್ನು ಮಾಡಲಾಗುತ್ತದೆ. ಸುಮಾರು 1,000 ಅವಧಿ ಪೂರ್ವ ಶಿಶುಗಳು ಸೇರಿದಂತೆ 2,000 ನವಜಾತ ಶಿಶುಗಳಿಗೆ ನವಜಾತ ತೀವ್ರ ಆರೈಕೆಯ ಅಗತ್ಯವಿರುತ್ತದೆ. ಅಂತಹ ಶಿಶುಗಳಿಗೆ ಎದೆ ಹಾಲು ಅತ್ಯುತ್ತಮ ಪೌಷ್ಟಿಕಾಂಶದ ಆಯ್ಕೆಯಾಗಿದೆ.

ಇದು ಸೋಂಕಿನ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಮತ್ತು ಮರಣವನ್ನು ಶೇಕಡಾ 20 ಕ್ಕಿಂತ ಕಡಿಮೆ ಮಾಡುತ್ತದೆ ಎಂದು ಡಾ ಕಾರ್ಲೆಟ್ಟಿ ಮಾಹಿತಿ ನೀಡಿದರು. ಈ ಮಧ್ಯೆ ಫಾರ್ಮುಲಾ ಅಥವಾ ಹಸುವಿನ ಹಾಲು ಅಕಾಲಿಕ ಶಿಶುಗಳಿಗೆ ಆರೋಗ್ಯದ ಅಪಾಯಗಳನ್ನು ಉಂಟುಮಾಡುತ್ತದೆ. ಹೀಗಾಗಿ ಎದೆಹಾಲು ಅಗತ್ಯವಾಗಿದೆ ಎಂದು ಅವರು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!