ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಣಗಳಿಲ್ಲ: ಸಚಿವ ಡಿ.ಸುಧಾಕರ್

ಹೊಸದಿಗಂತ ವರದಿ,ಚಿತ್ರದುರ್ಗ:
ಕಾಂಗ್ರೆಸ್ ಪಕ್ಷದಲ್ಲಿ ನಮ್ಮಲ್ಲಿ ಯಾವುದೇ ಬಣಗಳಿಲ್ಲ. ನಮ್ಮದು ಏನೇ ಇದ್ದರೂ ಕಾಂಗ್ರೆಸ್ ಬಣ ಮಾತ್ರ. ಸರ್ಕಾರದಲ್ಲಿ ಬಣ ಇದೆ ಎಂಬುದು ಮಾಧ್ಯಮಗಳ ಸೃಷ್ಠಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸ್ಪಷ್ಟಪಡಿಸಿದರು.

ಚಿತ್ರದುರ್ಗ ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ೨.೫ ವರ್ಷದ ಬಳಿ ಸಿಎಂ ಬದಲಾವಣೆ ಎಂದು ಕೆಲವು ಶಾಸಕರು ಹೇಳಿದ್ದಾರೆ. ಅದು ಅವರ ಭಾವನೆ. ನಾವೆಲ್ಲರೂ ಕೂಡಾ ಒಗಟ್ಟಿನಿಂದ ಇದ್ದೇವೆ. ಯಾವುದೇ ಗೊಂದಲವಿಲ್ಲ ಎಂದರು.
ಎಂ.ಬಿ. ಪಾಟೀಲ್ ಬಸವಣ್ಣನ ನಾಡು ಎಂದು ಅವರ ಅಭಿಪ್ರಾಯ ಹೇಳಿದ್ದಾರೆ. ಬಸವಣ್ಣನರು ಸಾಮಾಜಿಕ ನ್ಯಾಯದ ಹರಿಕಾರರು. ಈ ನಾಡಿಗೆ ಅವರು ತನ್ನದೇ ಆದ ಸಂದೇಶ ನೀಡಿದ್ದಾರೆ. ದುಬೈ ಪ್ರವಾಸ ಹೊರಟಿರುವುದು ಎಲ್ಲವೂ ಸುಳ್ಳು. ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಟೂರ್ ಹೋಗುತ್ತಿಲ್ಲ ಎಂದು ಹೇಳಿದರು.

ಸತೀಶ್ ಜಾರಕಿಹೊಳಿ ಪಕ್ಷದ ಹಿರಿಯ ನಾಯಕರು. ನಮ್ಮ ಪಕ್ಷ ಸಂಘಟನೆಗೆ ಹಲಿರುಳು ಶ್ರಮಿಸಿದ್ದಾರೆ. ಸಿ.ಎಂ. ಹಾಗೂ ಪರಮೇಶ್ವರ್ ಭೇಟಿಯ ಎಲ್ಲಾ ಮಾಹಿತಿ ಇದೆ. ಯಾವುದೇ ಡಿನ್ನರ್ ಪಾಲಿಟಿಕ್ಸ್ ಇಲ್ಲ. ಲೋಕಸಭಾ ಎಲೆಕ್ಷನ್ ಕುರಿತು ಚರ್ಚೆ ನಡೆದಿದೆ. ೨.೫ ವರ್ಷದ ಬಳಿಕ ಸಿಎಂ ಬದಲಾವಣೆ ವಿಚಾರ ಕುರಿತು ಪಕ್ಷ ಮತ್ತು ಹೈಕಮಾಂಡ್ ಹಾಗೂ ಸಿಎಂ, ಡಿಸಿಎಂ ನಿರ್ಧಾರ ಮಾಡುತ್ತಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here