ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗು ಚಿತ್ರರಂಗದ ಫೇಮಸ್ ನಟಿ ಅನುಷ್ಕಾ ಶೆಟ್ಟಿ ಮದುವೆ ವಿಷಯ ಮತ್ತೊಮ್ಮೆ ಮುನ್ನೆಗೆ ಬಂದಿತ್ತು. ಇದು ಸುಳ್ಳು ಸುದ್ದಿ ಎಂದು ಅವರ ಟೀಂ ಕನ್ಫರ್ಮ್ ಮಾಡಿದೆ.
44 ವರ್ಷದ ಅನುಷ್ಕಾ ಶೆಟ್ಟಿ ನಟ ಪ್ರಭಾಸ್ರನ್ನು ಮದುವೆಯಾಗ್ತಾರೆ ಎನ್ನುವ ಸುದ್ದಿಗಳು ಹರಿದಾಡಿತ್ತು. ಅದಾದಮೇಲೆ ಈಗಷ್ಟೇ ಅನುಷ್ಕಾ ಬೆಂಗಳೂರು ಮೂಲದ ಉದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎನ್ನುವ ಗುಸುಗುಸು ಎದ್ದಿತ್ತು. ಇದಕ್ಕೆ ಅನುಷ್ಕಾ & ಟೀಂ ಗರಂ ಆಗಿದೆ.
ಪ್ರತೀ ಬಾರಿ ನನ್ನ ಮದುವೆಯನ್ನೇ ಯಾಕೆ ಮಾಡಿಸ್ತೀರಿ? ಬೇಸ್ ಇಲ್ಲದೇ ಸುದ್ದಿಯನ್ನು ಹೇಗೆ ಬರೀತೀರಿ? ನನಗೆ ವಯಸ್ಸಾಗಿದೆ ಎಂದು ಟಾರ್ಗೆಟ್ ಮಾಡ್ತಾ ಇದ್ದೀರಾ? ನನಗಿಂತ ವಯಸ್ಸಾಗಿರೋ ಎಷ್ಟೋ ಹೀರೋಗಳು ಇನ್ನೂ ಸಿಂಗಲ್ ಆಗಿದ್ದಾರೆ. ಅವರ ಮದುವೆ ಬಗ್ಗೆ ಬರೆಯಿರಿ ಎಂದು ಅನುಷ್ಕಾ ಗರಂ ಆಗಿದ್ದಾರೆ.
ಅವರ ಟೀಂ ಕೂಡ ಅಪ್ಸೆಟ್ ಆಗಿದ್ದು, ಇಂಥ ಸುಳ್ಳು ಸುದ್ದಿಗಳನ್ನು ಹರಿಬಿಡಬೇಡಿ ಎಂದು ವಾರ್ನಿಂಗ್ ನೀಡಿದೆ.



