March 23, 2026
Monday, March 23, 2026
spot_img

ಹೊಟ್ಟೆಗೂ ಮೆದುಳಿಗೂ ಇದೆ ನಂಟು: ಊಟ ಲೇಟಾದ್ರೆ ಶುರುವಾಗುತ್ತೆ ಸಿಟ್ಟಿನ ಗಂಟು!

ನಮ್ಮ ದೇಹಕ್ಕೆ ಶಕ್ತಿ ನೀಡಲು ಗ್ಲೂಕೋಸ್ ಅತ್ಯಗತ್ಯ. ನಾವು ಆಹಾರ ಸೇವಿಸಿ ದೀರ್ಘ ಸಮಯವಾದಾಗ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಕುಸಿಯುತ್ತದೆ. ಗ್ಲೂಕೋಸ್ ಕೊರತೆಯಾದ ತಕ್ಷಣ ನಮ್ಮ ಮೆದುಳು ಅದನ್ನು ‘ತುರ್ತು ಪರಿಸ್ಥಿತಿ’ ಎಂದು ಪರಿಗಣಿಸುತ್ತದೆ.

ಮೆದುಳಿಗೆ ಸರಿಯಾದ ಪ್ರಮಾಣದ ಗ್ಲೂಕೋಸ್ ಸಿಗದಿದ್ದಾಗ, ಭಾವನೆಗಳನ್ನು ಹತೋಟಿಯಲ್ಲಿಡುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಇದರಿಂದ ಸಣ್ಣ ವಿಷಯಗಳಿಗೂ ಕಿರಿಕಿರಿ ಉಂಟಾಗುತ್ತದೆ.

ಗ್ಲೂಕೋಸ್ ಮಟ್ಟ ಇಳಿಕೆಯಾದಾಗ ದೇಹವು ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್ ಎಂಬ ‘ಸ್ಟ್ರೆಸ್ ಹಾರ್ಮೋನ್’ಗಳನ್ನು ಬಿಡುಗಡೆ ಮಾಡುತ್ತದೆ. ಇವು ನಮ್ಮಲ್ಲಿ ಆತಂಕ ಮತ್ತು ಕೋಪವನ್ನು ಹೆಚ್ಚು ಮಾಡುತ್ತವೆ.

ಹಸಿವು ಮತ್ತು ಕೋಪ ಎರಡನ್ನೂ ನಿಯಂತ್ರಿಸುವ ಜೀನ್‌ಗಳು ಒಂದೇ ಆಗಿರುವುದರಿಂದ, ಹಸಿವಾದಾಗ ಮೆದುಳು ಕೋಪದ ಸಂಕೇತಗಳನ್ನು ನೀಡಲು ಶುರುಮಾಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !