ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೈಬರ್ ಅಪರಾಧಗಳ ಕುರಿತು ರಾಜ್ಯ ಅಪರಾಧ ತನಿಖಾ ಇಲಾಖೆ(ಸಿಐಡಿ)ಯ ವಿಶ್ಲೇಷಣಾ ವರದಿಯೊಂದನ್ನು ತಯಾರು ಮಾಡಿದ್ದು, ಅದರಲ್ಲಿ ಶಾಕಿಂಗ್ ಸುದ್ದಿಯೊಂದು ಬಯಲಾಗಿದೆ.
ಸೈಬರ್ ಮೋಸದ ಜಾಲಕ್ಕೆ ವಯಸ್ಸಿನ ಆಧಾರದ ಮೇರೆಗೆ ಜನರನ್ನು ಬೀಳಿಸಿಕೊಂಡು ಖದೀಮರು ಲಕ್ಷ ಲಕ್ಷ ರೂಪಾಯಿ ದೋಚುತ್ತಿದ್ದಾರೆ. ಹದಿಹರೆಯದವರಿಗೆ ಸುಲಭವಾಗಿ ಹಣ ಸಂಪಾದಿಸುವ ಆಮಿಷವೊಡ್ಡಿ, ಮಧ್ಯ ವಯಸ್ಕರಿಗೆ ಹೂಡಿಕೆ ನೆಪದಲ್ಲಿ ವಂಚಿಸಿದರೆ ಹಾಗೂ ವೃದ್ಧರಿಗೆ ಡಿಜಿಟಲ್ ಅರೆಸ್ಟ್ ಮೂಲಕ ಬೆದರಿಸಿ ಸೈಬರ್ ಕ್ರಿಮಿನಲ್‌ಗಳು ಹಣ ಸುಲಿಗೆ ಮಾಡುತ್ತಿದ್ದಾರೆ.
ಬೆಂಗಳೂರು, ದೆಹಲಿ, ಕೋಲ್ಕತಾ, ಮುಂಬೈ ಹಾಗೂ ಕೊಚ್ಚಿ ಸೇರಿ ಮಹಾನಗರಗಳಲ್ಲಿ ದಾಖಲಾಗುವ ಅಪರಾಧ ಪ್ರಕರಣಗಳಲ್ಲಿ ಶೇ.20ರಷ್ಟು ಸೈಬರ್ ಪ್ರಕರಣಗಳಾಗಿವೆ. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ 52 ಸಾವಿರ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಆರೋಪಿಗಳು ಪತ್ತೆಯಾದ ಪ್ರಕರಣಗಳ ಸಂಖ್ಯೆ ಬಹಳ ಕಡಿಮೆ ಎನ್ನಲಾಗಿದೆ.