BCCI ಅಕೌಂಟ್‌ನಲ್ಲಿದೆ ಬರೋಬ್ಬರಿ ಹಣ! ಈ ಬಾರಿ ಐಪಿಎಲ್‌ನಿಂದಾದ ಕಲೆಕ್ಷನ್‌ ಎಷ್ಟು ಗೊತ್ತಾ??

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಳಿ ಬರೋಬ್ಬರಿ 30 ಸಾವಿರ ಕೋಟಿ ರೂ. ನಿಧಿ ಇದೆ. ಈ ನಿಧಿಯಿಂದಲೇ ಬಿಸಿಸಿಐ ಪ್ರತಿ ವರ್ಷ 1000 ಕೋಟಿ ರೂ. ಬಡ್ಡಿಗಳಿಸುತ್ತಿದೆ ಎಂಬ ಅಚ್ಚರಿಯ ಸಂಗತಿಯೊಂದು ಹೊರಬಿದ್ದಿದೆ.

ಈ ಬಗ್ಗೆ ರೆಡಿಪ್ಯೂಷನ್ ಸಂಸ್ಥೆ ವರದಿ ಮಾಡಿದ್ದು, ಬಿಸಿಸಿಐ 2023-24ರ ಆರ್ಥಿಕ ವರ್ಷದಲ್ಲಿ 9,742 ಕೋಟಿ ರೂ. ಆದಾಯಗಳಿಸಿದೆ ಎಂದು ಉಲ್ಲೇಖಿಸಿದೆ. 2008ರಲ್ಲಿ ಆರಂಭಗೊಂಡಿದ್ದ ಐಪಿಎಲ್ ಈಗ ಬಿಸಿಸಿಐ ಪಾಲಿನ ಚಿನ್ನದ ಮೊಟ್ಟೆ ಇಡುವ ಕೋಳಿ ಎನಿಸಿಕೊಂಡಿದ್ದು, ಬಿಸಿಸಿಐ ತನ್ನ ಹೆಚ್ಚಿನ ಆದಾಯವನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕವೇ ಗಳಿಸುತ್ತದೆ. ಲೀಗ್‌ನಿಂದ 2023-24ರಲ್ಲಿ ಮಂಡಳಿಗೆ 5,761 ಕೋಟಿ ರೂ. ಆದಾಯ ಲಭಿಸಿದೆ.

ಈ ನಿಧಿ ಬಿಸಿಸಿಐನ ಆದಾಯದ ಶೇ.59ರಷ್ಟಿದೆ. ಜೊತೆಗೆ ಐಸಿಸಿಯಿಂದಲೂ ಬಹುಪಾಲು ಮೊತ್ತ ಬಿಸಿಸಿಐಗೆ ಲಭಿಸುತ್ತದೆ. ಮಹಿಳಾ ಪ್ರೀಮಿಯರ್ ಲೀಗ್ (WPL)ನಿಂದ 378 ಕೋಟಿ ರೂ. ಆದಾಯ ಲಭಿಸಿದ್ದು, ಭಾರತದ ಪುರುಷರ ಕ್ರಿಕೆಟ್ ತಂಡದ ಸರಣಿಗಳ ಮೂಲಕ 2,350 ಕೋಟಿ ರೂ.ಗೂ ಹೆಚ್ಚು ಲಾಭವಾಗಿದೆ.

ಬಿಸಿಸಿಐ ತನ್ನ ಬಹುಪಾಲು ಆದಾಯವನ್ನು ಐಪಿಎಲ್ ಮೂಲಕವೇ ಗಳಿಸುತ್ತದೆ. ಐಪಿಎಲ್ ತಂಡಗಳ ಮಾರಾಟ, ಮಾಧ್ಯಮ ಹಕ್ಕು, ಜಾಹೀರಾತುಗಳಿಂದ ಬಹುಕೋಟಿ ಆದಾಯ ಬಿಸಿಸಿಐಗೆ ಬರುತ್ತದೆ. ಉಳಿದಂತೆ ಕಿಟ್ ಪ್ರಾಯೋಜಕತ್ವ, ಶೀರ್ಷಿಕೆ ಪ್ರಾಯೋಜಕತ್ವ, ಭಾರತ ತಂಡದ ಸರಣಿ ಆಯೋಜನೆ, ದೇಸಿ ಟೂರ್ನಿ, ಡಬ್ಲ್ಯುಪಿಎಲ್ ಹಾಗೂ ಇತರ ಮೂಲಗಳಿಂದಲೂ ಮಂಡಳಿಗೆ ಹಣ ಹರಿದುಬರುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!