October 12, 2026
Monday, October 12, 2026
spot_img

ಬೆಂಗಳೂರು ನಗರದಲ್ಲಿ ಕಸಕ್ಕಿಂತ ದೊಡ್ಡ ಸಮಸ್ಯೆಯೇ ಇಲ್ಲ: ಪ್ರತಿ ಮಂಗಳವಾರ ಫೋನ್-ಇನ್ ಕಾರ್ಯಕ್ರಮ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರು ನಗರದಲ್ಲಿ ತ್ಯಾಜ್ಯ ನಿರ್ವಹಣೆ ಬಹುದೊಡ್ಡ ಸಮಸ್ಯೆಯಾಗಿದೆ. ರಾತ್ರೋ ರಾತ್ರಿ ಕಸದ ಗುಂಡಿಗಳು ಉದ್ಭವವಾಗುತ್ತವೆ! ಒಂದು ಜಾಗದಲ್ಲಿ ಬಿದ್ದಿರುವ ಕಸವನ್ನು ತೆಗೆದು, ಜಾಗವನ್ನು ಸ್ವಚ್ಛಗೊಳಿಸಿ ಇಲ್ಲಿ ಕಸ ಹಾಕಬೇಡಿ ಎಂದು ಬರೆದು ಹೋದರೆ, ಒಂದೆರಡು ದಿನದಲ್ಲಿ ಮತ್ತೆ ಅದೇ ಜಾಗ ಕಸದ ಗುಂಡಿಯಾಗಿ ಪರಿವರ್ತನೆ ಆಗುತ್ತದೆ.

ಬೆಂಗಳೂರಿನ ಕಸ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಏನೇ ಸಮಸ್ಯೆಗಳಿದ್ದರೂ ನಾವು ಪರಿಹಾರ ನೀಡುತ್ತೇವೆ ಎಂದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಹೇಳಿದೆ. ಪ್ರತ್ಯೇಕವಾಗಿ ಕಸದ ಸಮಸ್ಯೆಗೆಂದೇ ನಾವು ವಿಶೇಷ ಫೋನ್‌ ಇನ್‌ ಕಾರ್ಯಕ್ರಮವನ್ನು ಆರಂಭಿಸಿದ್ದೇವೆ ಎಂದು ಮಾಹಿತಿ ನೀಡಿದೆ. ಘನತ್ಯಾಜ್ಯ ನಿರ್ವಹಣೆ ಹಾಗೂ ಕಸ ವಿಲೇವಾರಿಗೆ ಸಂಬಂಧಿಸಿದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಬೆಂಗಳೂರು ಉತ್ತರ ಸಿಟಿ ಕಾರ್ಪೊರೇಷನ್ ವತಿಯಿಂದ ವಿಶೇಷ ಹೆಲ್ಪ್‌ಲೈನ್ ಹಾಗೂ ಫೋನ್-ಇನ್ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಪ್ರತಿ ವಾರದ ಮಂಗಳವಾರ ಬೆಳಿಗ್ಗೆ 7.30ರಿಂದ 9.30ರವರೆಗೆ ಈ ವಿಶೇಷ ಕಾರ್ಯಕ್ರಮ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಮ್ಮ ವಾರ್ಡ್‌ಗಳಲ್ಲಿ ಕಸ ತೆಗೆದುಕೊಂಡು ಹೋಗುತ್ತಿಲ್ಲ, ಕಸ ತೆಗೆದುಕೊಂಡು ಹೋಗುತ್ತಾರೆ ಆದರೆ ನಿತ್ಯವೂ ಬರುವುದಿಲ್ಲ, ಕಸ ನಿತ್ಯವೂ ತೆಗೆದುಕೊಂಡು ಹೋಗುತ್ತಾರೆ ಆದರೆ ಒಂದೇ ಸಮಯಕ್ಕೆ ಬರುವುದಿಲ್ಲ ಇನ್ನಿತರ ಸಮಸ್ಯೆಗಳು ಅಥವಾ ದೂರುಗಳು ಇದ್ದರೆ ಅದನ್ನು ನೇರವಾಗಿ ಅಧಿಕಾರಿಗಳ ಗಮನಕ್ಕೆ ತರಬಹುದಾಗಿದೆ. ಇದಕ್ಕಾಗಿ ನಾಗರಿಕರು 080-22975936 ಅಥವಾ 080-23636671 ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು. ಇದರೊಂದಿಗೆ ಸಾರ್ವಜನಿಕರ ಅನುಕೂಲಕ್ಕಾಗಿ 9480685705 ವಾಟ್ಸಾಪ್ ಕೂಡ ಮಾಡಬಹುದಾಗಿದೆ.

ಈ ಫೋನ್-ಇನ್ ಕಾರ್ಯಕ್ರಮವು ವಲಯ ಜಂಟಿ ಆಯುಕ್ತರ ನೇತೃತ್ವದಲ್ಲಿ ನಡೆಯಲಿದ್ದು, ಘನತ್ಯಾಜ್ಯ ನಿರ್ವಹಣೆಯ ಉಪ ಪ್ರಧಾನ ವ್ಯವಸ್ಥಾಪಕರು ದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಕಸದ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ದೊರೆಯುವಂತೆ ನೋಡಿಕೊಳ್ಳಲು ಇದು ಸಹಕಾರಿಯಾಗಲಿದೆ.

Must Read