ಮೂರು ರಾಜ್ಯಗಳ ಸಿಎಂ ಆಯ್ಕೆಗೆ ಒಮ್ಮತ ಇಲ್ಲ: ಇಂದು ವೀಕ್ಷಕರನ್ನು ಕಳಿಸಲಿದೆ ಬಿಜೆಪಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿ ಅದ್ಭುತ ಗೆಲುವು ಸಾಧಿಸಿದೆ. ಆದರೆ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಇನ್ನೂ ಒಮ್ಮತ ಮೂಡಿಲ್ಲ.

ಈ ಕಾರಣದಿಂದಾಗಿ ಸಿಎಂ ಆಯ್ಕೆ ಅಂತಿಮಗೊಳಿಸಲು ಬಿಜೆಪಿ ಹೈಕಮಾಂಡ್ ಇಂದು ಮೂರೂ ರಾಜ್ಯಗಳಿಗೆ ವೀಕ್ಷಕರನ್ನು ಕಳಿಸಲಿದೆ.

ಗೆದ್ದಿರುವ ಮೂರೂ ರಾಜ್ಯಗಳಲ್ಲಿ ಮುಖ್ಯಮಂತ್ರಿ ಹುದ್ದೆಗೆ ಸಂಭಾವ್ಯ ಪಟ್ಟಿಯಲ್ಲಿ ಬೆರಳೆಣಿಕೆಯಷ್ಟೇ ಹೆಸರುಗಳಿವೆ. ಈ ಕಾರಣದಿಂದ ವೀಕ್ಷಕರು ಮೂರು ರಾಜ್ಯಗಳಿಗೆ ತೆರಳಿ ಹೊಸದಾಗಿ ಚುನಾಯಿತ ಶಾಸಕರ ಸಭೆಗಳನ್ನು ಮೇಲ್ವಿಚಾರಣೆ ಮಾಡುವ ಸಾಧ್ಯತೆ ಇದೆ.

ಈ ಬಾರಿ ಬಿಜೆಪಿ ಗೆದ್ದಿರು ಮೂರೂ ರಾಜ್ಯಗಳಲ್ಲಿ ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಹೇಳಿರಲಿಲ್ಲ. ಬಿಜೆಪಿಯ ಜನಾದೇಶ ನೀತಿಗಳು ಹಾಗೂ ಪ್ರಧಾನಿ ಮೋದಿ ನಾಯಕತ್ವಕ್ಕೆ ಜನ ಬೆಂಬಲ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!