ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್ ಇಸ್ರೇಲ್ ಯುದ್ಧದ ಬಿಸಿ ದೇಶದ ಮದುವೆ ಮನೆಗಳಿಗೆ ತಟ್ಟಿದೆ. ನಮ್ಮಲ್ಲಿ ಸಿಲಿಂಡರ್ ಸ್ಟಾಕ್ ಇಲ್ಲ, ಅಡುಗೆ ಬೇಕಂದ್ರೆ ನೀವೇ ಸಿಲಿಂಡರ್ ತೆಗೆದುಕೊಂಡು ಬನ್ನಿ ಎಂದು ಕಲ್ಯಾಣ ಮಂಟಪದ ಓನರ್‌ಗಳು ಹೇಳುತ್ತಿದ್ದಾರೆ.
ಮದುವೆ ಮನೆಯ ನೂರು ಕೆಲಸದ ಜೊತೆ ಇದೊಂದು ಸೇರಿಕೊಂಡಂತಾಗಿದೆ. ಕಲ್ಯಾಣ ಮಂಟಪದವರಿಗೆ ವಾಣಿಜ್ಯ ಬಳಕೆಯ ಗ್ಯಾಸ್ ಸಿಗುತ್ತಿಲ್ಲ. ಹೀಗಾಗಿ ಯಾರು ಮಂಟಪ ಬುಕ್ ಮಾಡ್ತಾರೋ ಅವರೇ ಸಿಲಿಂಡರ್ ಕೂಡ ತರಬೇಕು ಎಂದು ಸಿಬ್ಬಂದಿ ಹೇಳ್ತಿದ್ದಾರೆ.
ಮದುವೆಯ ಸೀಸನ್‌ನಲ್ಲಿ ಮಂಟಪ ಬುಕ್ ಮಾಡೋಕೆ ಕಷ್ಟವಾಗುತ್ತಿದೆ. ಹೀಗಿರುವಾಗ ಗ್ಯಾಸ್ ಸಿಲಿಂಡರ್ ಇಲ್ಲದೇ ಹೋದರೆ ಮದುವೆಗೆ ಬರುವ ಜನರಿಗೆ ಊಟ ಡೌಟ್!



