ಚಿಗುರೊಡೆಯುತ್ತಿವೆ ಹಳೆಯ ಗೆಳೆತನಗಳು: ಸ್ನೇಹಿತರಿಗೆ ವರದಾನದವಾದ ಸಾಮಾಜಿಕ ಜಾಲತಾಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೋಶಿಯಲ್ ಮೀಡಿಯಾಗೆ ಅಂಟಿಕೊಂಡಿದ್ದಾರೆ.. ಸೋಶಿಯಲ್ ಮೀಡಿಯಾಕ್ಕೆ ಅಡಿಕ್ಟ್ ಆಗಿದ್ದಾರೆ ಎಂದು ಬೈಯುತ್ತಾರೆ. ಆದರೆ ಸೋಷಿಯಲ್ ಮೀಡಿಯಾ ಹಲವು ರೀತಿಯಲ್ಲಿ ಒಳ್ಳೆಯದನ್ನೂ ಮಾಡಿದೆ. ಅದರಲ್ಲಿ ಹಳೆಯ ಗೆಳೆತನ ಬೆಸೆಯಲು ಒಂದು ವೇದಿಕೆಯಾಗಿ ಕೆಲಸ ಮಾಡುತ್ತಿದೆ.

ಸಾಮಾಜಿಕ ಜಾಲತಾಣ ಸ್ವೇಹಿತರಿಗೆ ವರದಾನವೆಂದೇ ಹೇಳಬೇಕು. ನಮ್ಮ ಪ್ರೀತಿಪಾತ್ರರು ಎಷ್ಟೇ ದೂರದಲ್ಲಿದ್ದರೂ ಅವರೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುವ ಹಲವಾರು ಅಪ್ಲಿಕೇಶನ್‌ಗಳಿವೆ. ಕೆಲವು ಸಂಶೋಧನೆಗಳ ಪ್ರಕಾರ, 65 ವರ್ಷಕ್ಕಿಂತ ಮೇಲ್ಪಟ್ಟ 40 ಪ್ರತಿಶತ ವಯಸ್ಕರು ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಸಂವಹನ ನಡೆಸಲು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಾರೆ.

2005 ರಿಂದ ಈ ಶೇಕಡಾವಾರು ಹೆಚ್ಚಾಗುತ್ತಿದೆ. ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಹಲವಾರು ಅಪ್ಲಿಕೇಶನ್‌ಗಳಿವೆ. ಇವುಗಳ ಮೂಲಕ ಕಳೆದುಹೋದ ಸ್ನೇಹಿತರನ್ನು ಗುರುತಿಸುವುದು, ಅವರನ್ನು ಮತ್ತೆ ಭೇಟಿಯಾಗುವ ಅವಕಾಶವು ಬಂದೊದಗುತ್ತಿದೆ.

ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಜೊತೆಗೆ ಕೆಲವು ಸದುಪಯೋಗಗಳೂ ಇವೆ.  ನಮಗೆ ಗೊತ್ತಿಲ್ಲದ ಅನೇಕ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ನಮಗೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!