ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಬಜೆಟ್ ನಲ್ಲಿ ಇರಾನ್ ನ ಚಬಹಾರ್ ಬಂದರು ಅಭಿವೃದ್ಧಿಗೆ ಯಾವುದೇ ಹಣ ಮೀಸಲಿಡದಿರುವುದು ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಈ ನಿರ್ಧಾರವನ್ನು ಅಮೆರಿಕದ ಒತ್ತಡಕ್ಕೆ ಶರಣಾಗತಿಯ ಸಂಕೇತ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಸೋಮವಾರ ಹೇಳಿದ್ದಾರೆ.
ಇರಾನ್‌ನ ಮೇಲೆ ಕಠಿಣ ಅಮೆರಿಕ ನಿರ್ಬಂಧಗಳು ಮತ್ತು ಇರಾನ್ ಜೊತೆಗೆ ವ್ಯವಹಾರವನ್ನು ಮುಂದುವರೆಸುವ ದೇಶಗಳ ಮೇಲೆ ಹೆಚ್ಚುವರಿ ಸುಂಕಗಳ ಒತ್ತಡದಿಂದಾಗಿ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಚಬಹಾರ್ ಬಂದರು ಅಭಿವೃದ್ಧಿಗೆ ಯಾವುದೇ ಹಣ ಮೀಸಲಿಟ್ಟಿಲ್ಲ ಎಂದಿದ್ದಾರೆ.
ಈ ಹಿಂದೆ ಮಧ್ಯ ಏಷ್ಯಾದ ಕಾರ್ಯತಂತ್ರದ ಹೆಬ್ಬಾಗಿಲು ಮತ್ತು ಚೀನಾದ ಗ್ವಾದರ್ ಬಂದರಿಗೆ ಪ್ರತಿತಂತ್ರ ಎಂದು ಭಾರತವೇ ಹೇಳುತ್ತಿದ್ದ ಚಬಹಾರ್ ಬಂದರಿಗೆ ಕಳೆದ ವರ್ಷ ಪರಿಷ್ಕೃತ ಬಜೆಟ್ ನಲ್ಲಿ 400 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು.



