ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶ,ವಿದೇಶಗಳಲ್ಲಿ ಅದ್ದೂರಿಯಾಗಿ ತೆರೆಕಂಡ ಸಿನಿಮಾ ಆದಿಪುರುಷ್ . ಒಂದೆಡೆ ಉತ್ತಮವಾಗಿ ಪ್ರದರ್ಶನ ಕಾಣುತ್ತಿದ್ದು,ಮತ್ತೊಂದೆಡೆ ನಾನಾ ವಿವಾದಗಳಿಗೆ ಸಿಲುಕಿಕೊಳ್ಳುತ್ತಿದೆ.
ಸಿನಿಮಾಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಇಲ್ಲಿ ಪ್ರಭಾಸ್ ನಟನೆ ಬಿಟ್ಟರೇ ಅಭಿಮಾನಿಗಳಿಗೆ ಸಿನಿಮಾ ಇಷ್ಟವಾಗಿಲ್ಲ.
ನಿರ್ದೇಶನ, ಸಂಭಾಷಣೆ, ವಿಎಕ್ಸ್‌ಎಫ್, ಪಾತ್ರಗಳ ಡಿಸೈನ್ ಸೇರಿದಂತೆ ಎಲ್ಲಾ ವಿಚಾರದಲ್ಲೂ ಆದಿಪುರುಷ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.
ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಅನೇಕ ಕಲಾವರಿದರು ಕೂಡ ಆದುಪುರುಷ್ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ನಟಿ ಕಂಗನಾ ರಣಾವತ್ ಕೂಡ ಪ್ರತಿಕ್ರಿಯೆ ನೀಡಿ, ರಾಮನ ಹೆಸರು ಹಾಳು ಮಾಡಬೇಡಿ’ ಎಂದು ಪರೋಕ್ಷವಾಗಿ ಹೇಳಿದ್ದರು. ಇದೀಗ ಬಾಲಿವುಡ್ ಹಿರಿಯ ನಟ ಮುಖೇಶ್ ಖನ್ನಾ ಕೂಡ ಆಕ್ರೋಶ ಹೊರಹಾಕಿದ್ದಾರೆ.
ಯೂಟ್ಯೂಬ್ ವಾಹಿನಿಯೊಂದರಲ್ಲಿ ಮಾತನಾಡಿರುವ ಮುಖೇಶ್ ಖನ್ನಾ, ಆದಿಪುರುಷ್ ನಿರ್ದೇಶಕರ ವಿರುದ್ಧ ಕಿಡಿಕಾರಿದ್ದಾರೆ. ರಾಮಾಯಣಕ್ಕೆ ‘ಆದಿಪುರುಷ’ಗಿಂತ ದೊಡ್ಡ ಅಗೌರವ ಇನ್ನೊಂದಿಲ್ಲ ಎಂದು ಹೇಳಿದ್ದಾರೆ.
ಓಂ ರಾವುತ್‌ಗೆ ರಾಮಾಯಣದ ಬಗ್ಗೆ ಯಾವುದೇ ಜ್ಞಾನವಿಲ್ಲ ಎಂದು ತೋರುತ್ತದೆ. ಅದರ ಮೇಲೆ ನಮ್ಮ ರಾಮಾಯಣವನ್ನು ‘ಕಲಿಯುಗ್’ ಆಗಿ ಪರಿವರ್ತಿಸಿದ ಮಹಾನ್ ಬುದ್ಧಿಜೀವಿ ಬರಹಗಾರ ಮನೋಜ್ ಮುಂತಶಿರ್ ನಮ್ಮಲ್ಲಿದ್ದಾರೆ’ ಎಂದಿದ್ದಾರೆ. ಆದಿಪುರುಷ್ ಸಿನಿಮಾ ‘ಭಯಾನಕ್ ಮಜಾಕ್’ . ಚಿತ್ರದ ಕೆಲವು ಪಾತ್ರಗಳ ಚಿತ್ರಣವನ್ನು ಟೀಕಿಸಿದ್ದಾರೆ. ‘ಮೇಘನಾದ್ ದೇಹದಾದ್ಯಂತ ಹಚ್ಚೆ ಹಾಕಿಸಿಕೊಂಡು WWE ಕುಸ್ತಿಪಟುನಂತೆ ಕಾಣುತ್ತಿದ್ದರೆ. ಇನ್ನೂ ರಾವಣ ಲುಕ್ ಚೀಪ್ ಕಳ್ಳಸಾಗಾಣಿಕೆದಾರನಂತೆ ಕಾಣುತ್ತಾನೆ’ ಮುಖೇಶ್ ಖನ್ನಾ ಸಿನಿಮಾತಂಡದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.