ಚೆಟ್ಟಿನಾಡ್ ಚಿಕನ್ ಮಾಡುವ ವಿಧಾನ
ಮೊದಲು ಬಾಣಲೆಗೆ ಕೊತ್ತಂಬರಿ ಕಾಳು, ಜೀರಿಗೆ, ಸೋಂಪು, ಚಕ್ಕೆ, ಲವಂಗ, ಮರಾಠಿಮೊಗ್ಗು, ಕಾಳುಮೆಣಸು, ಕಾಯಿ, ಒಣಮೆಣಸು ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ಇದು ತಣ್ಣಗಾದ ಮೇಲೆ ರುಬ್ಬಿ ಇಟ್ಟುಕೊಳ್ಳಿ
ನಂತರ ಬಾಣಲೆಗೆ ಎಣ್ಣೆ ಈರುಳ್ಳಿ, ಹಸಿಮೆಣಸು, ಶುಂಠಿ ಬೆಳ್ಳುಳ್ಳು ಪೇಸ್ಟ್ ಹಾಕಿ, ಟೊಮ್ಯಾಟೊ ಹಾಕಿ ಬಾಡಿಸಿ. ಇದಕ್ಕೆ ಚಿಕನ್ ಹಾಕಿ ಬೇಯಿಸಿ
ಚಿಕನ್ ಬೆಂದಿದೆ ಎನಿಸಿದಾಗ ಇದಕ್ಕೆ ಮಿಕ್ಸಿ ಮಾಡಿದ ಮಸಾಲಾ ಹಾಕಿ ಸಣ್ಣ ಉರಿಯಲ್ಲಿ ಚಿಕನ್ ಬೇಯುವವರೆಗೂ ಬೇಯಿಸಿ ಕೊತ್ತಂಬರಿ ಹಾಕಿ ಬಿಸಿ ಬಿಸಿ ಚೆಟ್ಟಿನಾಡ್ ಚಿಕನ್ ತಿಂದುಬಿಡಿ..