ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ ಮೆಟ್ರೋ ಸೇವೆ ಇರುವುದಿಲ್ಲ.
ನೇರಳೆ ಮಾರ್ಗದಲ್ಲಿ ವಿಸ್ತರಿತ ಸಂಚಾರದ ಕಾಮಗಾರಿಗಾಗಿ ಇಂದು ಮೆಟ್ರೋ ರೈಲು ಓಡಾಟ ಸ್ಥಗಿತಗೊಳಿಸಲಾಗಿದೆ.
ಸಿಗ್ನಲಿಂಗ್ ಹಾಗೂ ಇನ್ನಿತರ ಕೆಲಸಗಳು ನಡೆಯುತ್ತಿರುವ ಕಾರಣ ಮೆಟ್ರೋ ಸೇವೆ ವ್ಯತ್ಯಯವಾಗಲಿದೆ. ಮೈಸೂರು ರಸ್ತೆ ಹಾಗೂ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ಬೆಳಗ್ಗೆ 5 ರಿಂದ ರಾತ್ರಿ 11 ರವರೆಗೆ ರೈಲು ಸಂಚಾರ ಇರಲಿದೆ.